ಉತ್ತಮ ವ್ಯಕ್ತಿತ್ವದಿಂದ ಉತ್ತುಂಗಕ್ಕೆ : ಜೈಸನ್ ಸೈಮನ್ ಒವೈಸಿ ಕಿವಿಮಾತು

nellyadi
Published on

ನೆಲ್ಯಾಡಿ: ನೆಲ್ಯಾಡಿಯ ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಭಿಯಂತರ ದಿನವನ್ನು ಬುಧವಾರ ಆಚರಿಸಲಾಯಿತು. ಸಂಸ್ಥೆಯ ನಿರ್ದೇಶಕ ಜೈಸನ್ ಸೈಮನ್ ಒವೈಸಿ ಅಧ್ಯಕ್ಷತೆ ವಹಿಸಿ, ಉತ್ತಮ ವ್ಯಕ್ತಿತ್ವ ಹಾಗೂ ವರ್ತನೆ ಮನುಷ್ಯನನ್ನು ಉತ್ತುಂಗಕ್ಕೇರಿಸುತ್ತದೆ ಎಂದರು.

ವಿಶ್ವೇಶ್ವರಯ್ಯ ಭಾವಚಿತ್ರಕ್ಕೆ ಅತಿಥಿಗಳು ಹಾಗೂ ವಿದ್ಯಾರ್ಥಿಗಳು ಪುಷ್ಪಾರ್ಚನೆಗೈದರು. ವಿಶ್ವೇಶ್ವರಯ್ಯ ಕುರಿತಾದ ಸಂಕ್ಷಿಪ್ತ ಮಾಹಿತಿಯನ್ನು ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಸುಬ್ರಾಯ ನಾಯಕ್ ನೀಡಿದರು. ವಿಶ್ವೇಶ್ವರಯ್ಯ ಕುರಿತಾದ ಸಾಕ್ಷೃಚಿತ್ರದ ಪ್ರದರ್ಶನವನ್ನು ಸಂಸ್ಥೆಯ ಕಂಪ್ಯೂಟರ್ ವಿಭಾಗದ ಸುನೀಲ್ ಜೋಸೆಫ್ ನಿರ್ವಹಿಸಿದರು.

ಸಂಸ್ಥೆಯ ನಿರ್ದೇಶಕ ಸಜಿ ಕೆ.ಥೋಮಸ್ ಹಾಗೂ ತರಬೇತಿ ಅಧಿಕಾರಿ ಜಾನ್ ಪಿ.ಎಸ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಹರಿಪ್ರಸಾದ್ ರೈ ನಿರೂಪಿಸಿದರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net