ಸಂದೇಶ ಪಾಲನೆಯಿಂದ ಆಚರಣೆ ಸಾರ್ಥಕ: ಶೌಕತ್​ ಅಲಿ ಫೈಝಿ ಕರೆ

Kdb_eid-milad
Published on

ಕಡಬ: ಪ್ರವಾದಿ ಮಹಮ್ಮದ್​ ಪೈಗಂಬರರು ಸೌಹಾರ್ದ, ಭ್ರಾತೃತ್ವ, ಒಗ್ಗಟ್ಟಿಗೆ ಒತ್ತು ಕೊಟ್ಟವರು. ಅವರ ಸಂದೇಶ ಪಾಲನೆ ಆದರೆ ಮಾತ್ರ ನೆಬಿ ದಿನ ಆಚರಣೆ ಸಾರ್ಥಕ ಆಗಲು ಸಾಧ್ಯ ಎಂದು ಗಂಡಿಬಾಗಿಲು ಮಸೀದಿ ಖತೀಬ್​ ಅಬ್ದುಲ್​ ಹಮೀದ್​ ಶೌಕತ್​ ಅಲಿ ಫೈಝಿ ಹೇಳಿದರು.

ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿಯಲ್ಲಿ ನುಜೂಮುಲ್​ ಇಸ್ಲಾಂ ಯಂಗ್​ಮೆನ್ಸ್​ ವತಿಯಿಂದ ಹಮ್ಮಿಕೊಳ್ಳಲಾದ ಈದ್​&ಮಿಲಾದ್​ ಸಮಾರಂಭದ ಅಧ್ಯಕ್ಷತೆ ವಹಿಸಿ, ಮೆರವಣಿಗೆ ಉದ್ಘಾಟಿಸಿ ಮಾತನಾಡಿದರು.

ಗಂಡಿಬಾಗಿಲಿನಿಂದ ಹೊರಟ ಮಿಲಾದ್​ ಮೆರವಣಿಗೆ ಕೊೃಲ, ನೀರಾಜೆ ಮದ್ರಸದಲ್ಲಿ ಸಮಾಗಮಗೊಂಡು ಅಲ್ಲಿಂದ ಬಳಿಕ ಕೆಮ್ಮಾರ ಶಾಲಾ ಬಳಿ ತನಕ ಸಾಗಿ ಮರಳಿ ಬಂದು ಗಂಡಿಬಾಗಿಲು ಶಾಲಾ ತನಕ ಸಾಗಿ ಬಂದು ಮಸೀದಿ ಬಳಿ ಸಮಾಪನಗೊಳಿಸಲಾಯಿತು. ಮೆರವಣಿಗೆ ಬಳಿಕ ಮಸೀದಿಯಲ್ಲಿ ಮೌಲೀದ್​ ಪಾರಾಯಣ, ಅನ್ನ ಸಂತರ್ಪಣೆ ನಡೆಯಿತು. ಬೆಳಗ್ಗೆ ಧ್ವಜಾರೋಹಣ ಯಂಗ್​ಮೆನ್ಸ್​ ಅಧ್ಯಕ್ಷ ಪಿ.ಲತೀಫ್​ ನೆರವೇರಿಸಿದರು.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮಸೀದಿ ಅಧ್ಯಕ್ಷ ಆದಂ ಹಾಜಿ, ಪ್ರಧಾನ ಕಾರ್ಯದರ್ಶಿ ಎಸ್​.ಆದಂ ಹಾಜಿ, ಉಪಾಧ್ಯಕ್ಷ ಜಿ.ಮಹಮ್ಮದ್​ ರಫೀಕ್​, ಖಜಾಂಚಿ ಹಸೈನಾರ್​ ಹಾಜಿ, ಜತೆ ಕಾರ್ಯದರ್ಶಿ ಅಬ್ದುಲ್​ ರಜಾಕ್​ ಮರ್ವೇಲ್​, ಜಿ.ಅಬ್ದುಲ್​ ರಜಾಕ್​, ನಝೀರ್​ ಪೂರಿಂಗ, ಎಸ್​.ಅಬ್ದುಲ್​ ರಹಿಮಾನ್​, ಝಕರಿಯಾ ನೇರೆಂಕಿ, ಎಸ್​.ರಜಾಕ್​, ಅಬ್ದುಲ್​ ರಹಿಮಾನ್​ ಅದ್ದ, ಗಂಡಿಬಾಗಿಲು ನುಜೂಮುಲ್​ ಇಸ್ಲಾಂ ಯಂಗ್​ಮೆನ್ಸ್​ ಅಧ್ಯಕ್ಷ ಪಿ.ಅಬ್ದುಲ್​ ಲತೀಫ್​, ಕಾರ್ಯದರ್ಶಿ ಝಿಯಾದ್​, ಸದರ್​ ಮುಅಲ್ಲಿಂ ಅಬ್ದುಲ್​ ರಹಿಮಾನ್​ ಫೈಝಿ, ಬದ್ರುದ್ದೀನ್​ ಮುಸ್ಲಿಯಾರ್​, ಇಬ್ರಾಹಿಂ ಮುಸ್ಲಿಯಾರ್​, ಎಸ್​.ಕೆ.ಎಸ್​.ಎಸ್​.ಎಫ್​ ಅಧ್ಯಕ್ಷ ಇಸಾಕ್​ ಬೊಲುಂಬುಡ, ಪದಾಧಿಕಾರಿಗಳಾದ ಖಲಂದರ್​ ಎಸ್​.ಪಿ, ಆಶಿಫ್​ ಜಿ.ಎಂ, ಅನಸ್​, ರಾಹಿಲ್​, ಸಾಕಿರ್​, ಮುಸ್ತಫಾ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net