

ಗೋಣಿಕೊಪ್ಪ: ಬೆಂಗಳೂರು ಜಯಪ್ರಕಾಶ್ ನಾರಾಯಣ್ ಸೆಂಟ್ರಲ್ ಯೂತ್ ಸ್ಪೋರ್ಟ್ಸ್ ಇಂಟರ್ ನ್ಯಾಷನಲ್ ಬಾಕ್ಸಿಂಗ್ ಸ್ಟೇಡಿಯಂನಲ್ಲಿ, ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕೊಡಗಿನ ಮೂವರು ವಿದ್ಯಾರ್ಥಿಗಳು ಪದಕ ಪಡೆದುಕೊಂಡಿದ್ದಾರೆ.
17 ವರ್ಷದೊಳಗಿನ ವಿಭಾಗದಲ್ಲಿ ಗೋಣಿಕೊಪ್ಪಲು ಪ್ರೌಢಶಾಲೆ ವಿದ್ಯಾರ್ಥಿ ನಿರನ್ ಬೋಪಣ್ಣ, ಚಿನ್ನದ ಪದಕ, 14 ವರ್ಷದೊಳಗಿನವರ ವಿಭಾಗದಲ್ಲಿ ಅರ್ವತೊಕ್ಕಲು ಸರ್ವದೈವತಾ ಶಾಲೆಯ ವಿದ್ಯಾರ್ಥಿ ಲಿಖಿತ್ ಚಿಣ್ಣಪ್ಪ ಹಾಗೂ ಗೋಣಿಕೊಪ್ಪಲು ಲಯನ್ಸ್ ಶಾಲೆಯ ವಿದ್ಯಾರ್ಥಿ ಡ್ಯಾನಿಕಾ ದೇಚಮ್ಮ ಕಂಚಿನ ಪದಕ ಪಡೆಯುವ ಮೂಲಕ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಬಾಕ್ಸಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಕೊಡಗು ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಚೆಪ್ಪುಡಿರ ಕರ್ನಲ್ ಮುತ್ತಣ್ಣ ಮಾರ್ಗದರ್ಶನದಲ್ಲಿ ದೇಯಂಡ ಮೇದಪ್ಪ ಹಾಗೂ ಶರತ್ ತರಬೇತಿ ನೀಡಿದ್ದಾರೆ.