ಮಕ್ಕಳ ಸ್ನೇಹಿ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆ

MDG- makkala teacher
Published on

ಮುಂಡರಗಿ: ಪಟ್ಟಣದ ಕಲಾ ಶಿಕ್ಷಣ-ಸಂಸ್ಕೃ ಪ್ರತಿಷ್ಠಾನವು ಕೊಡಲ್ಪಡುವ 2023ರ ಮಕ್ಕಳ ಸ್ನೇಹಿ ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿಗೆ ರೋಣ ತಾಲೂಕಿನ ಬೆಳವಣಕಿ ಸರ್ಕಾರಿ ಮಾದರಿ ಕೇಂದ್ರ ಶಾಲೆಯ ಶಿಕ್ಷಕ ಎಫ್.ಸಿ. ಚೇಗರಡ್ಡಿ, ಗದಗ ಎಸ್.ಎಂ. ಕೃಷ್ಣ ನಗರದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ವಿವೇಕಾನಂದಗೌಡ ಪಾಟೀಲ, ಮುಂಡರಗಿ ತಾಲೂಕಿನ ಬರದೂರ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಮಲ್ಲಿಕಾ ನಾಯಕ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯು 5000 ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ.


ಪಟ್ಟಣದಲ್ಲಿ ಸೆ. 9ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಲಾ ಶಿಕ್ಷಣ-ಸಂಸ್ಕೃ ಪ್ರತಿಷ್ಠಾನದ ಅಧ್ಯಕ್ಷ ಡಾ. ನಿಂಗು ಸೊಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net