ರಿಚರ್ಡ್​ ಹ್ಯಾನ್ಸೆನ್​ಗೆ ಸೆಲ್ಕೋ ಇಂಡಿಯಾದ 'ಸೂರ್ಯಮಿತ್ರ' ಪ್ರಶಸ್ತಿ

Richerd
Published on

ಬೆಂಗಳೂರು: ಸೆಲ್ಕೋ ಇಂಡಿಯಾದ 2023ನೇ ಸಾಲಿನ 'ಸೂರ್ಯಮಿತ್ರ' ವಾರ್ಷಿಕ ಪ್ರಶಸ್ತಿಗೆ ಅಮೆರಿಕದ ಸೌರ ವಿದ್ಯುತ್​ ಪ್ರವರ್ತಕ ರಿಚರ್ಡ್​ ಹ್ಯಾನ್ಸೆನ್​ ಆಯ್ಕೆಯಾಗಿದ್ದಾರೆ. ಮಲ್ಲೇಶ್ವರದ ವೈಯಾಲಿಕಾವಲ್​ನಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಮೇ 27ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ರಿಚರ್ಡ್​ ಹ್ಯಾನ್ಸೆನ್​ ಅವರು ಪ್ರಸ್ತುತ ಎನರ್ಜಿ ಅಕ್ಸೆಸ್​ ಫೌಂಡೇಷನ್​ನ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಸುಸ್ಥಿರ ಶಕ್ತಿಯೆಡೆಗಿನ ಪರಿವರ್ತನೆಗೆ ಸಹಾಯ ಮಾಡುವ ಉದ್ದೇಶದಿಂದ 1993ರಲ್ಲಿ ರಿಚರ್ಡ್​ ಸೋಲುಜ್​ ಇಂಕ್​ ಎಂಬ ಸಾಮಾಜಿಕ ಉದ್ಯಮವನ್ನು ಸ್ಥಾಪಿಸಿದ್ದಾರೆ.

ಅಭಿವೃದ್ಧೀಶಿಲ ರಾಷ್ಟ್ರಗಳ ಗ್ರಾಮೀಣ ಪ್ರದೇಶದಲ್ಲಿ ಸೌರ ವಿದ್ಯುತ್​ ಸೌಲಭ್ಯ ಹೆಚ್ಚಿಸಲು ಹಾಗೂ ಆಧುನಿಕ ಫೋಟೊ ವೋಲ್ಟಾಯಿಕ್​ (ಪಿವಿ) ತಂತ್ರಾನವನ್ನು ಕಿರು ಹಣಕಾಸು ಸಂಸ್ಥೆಗಳ ಮೂಲಕ ಪ್ರಸರಿಸುವಲ್ಲಿ ರಿಚರ್ಡ್​ ಹ್ಯಾನ್ಸೆನ್​ ಸಲ್ಲಿಸಿರುವ ಸೇವೆ ಪರಿಗಣಿಸಿ "ಸೂರ್ಯಮಿತ್ರ' ಪ್ರಶಸ್ತಿ ನೀಡಲಾಗಿದೆ ಎಂದು ಸೆಲ್ಕೋ ಇಂಡಿಯಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೋಹನ ಭಾಸ್ಕರ ಹೆಗಡೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net