ಸೀನಪ್ಪಕಾಟಿಕೆರೆ ಜಾಜೂರು ಗ್ರಾ.ಪಂ. ಉಪಾಧ್ಯಕ್ಷ

AVIRODHA AYKE
ಅರಸೀಕೆರೆ ತಾಲೂಕಿನ ಕಸಬಾ ಹೋಬಳಿಯ ಜಾಜೂರು ಗ್ರಾಮ ಪಂಚಾಯಿತಿಗೆ ಉಪಾಧ್ಯಕ್ಷರಾಗಿ ಸೀನಪ್ಪಕಾಟಿಕೆರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Published on

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಸಬಾ ಹೋಬಳಿಯ ಜಾಜೂರು ಗ್ರಾಮ ಪಂಚಾಯಿತಿಗೆ ಉಪಾಧ್ಯಕ್ಷರಾಗಿ ಸೀನಪ್ಪಕಾಟಿಕೆರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಿದ್ದಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಸದಸ್ಯ ಸೀನಪ್ಪಕಾಟಿಕೆರೆ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ಸಂತೋಷ್ ಕುಮಾರ್ ಘೋಷಿಸಿದರು.

ಗ್ರಾ.ಪಂ.ಅಧ್ಯಕ್ಷೆ ಲೀಲಾಬಾಯಿ ಚಂದ್ರಶೇಖರ್‌ನಾಯ್ಕ, ಸದಸ್ಯರಾದ ರಾಜಮ್ಮ ರಂಗಸ್ವಾಮಿ, ವನಜಾಕ್ಷಿ ಪ್ರದೀಪ್, ಭಾನುಪ್ರಿಯಾ, ಓಂಕಾರಮೂರ್ತಿ ನಾಗತಿಹಳ್ಳಿ, ಮುಖಂಡರಾದ ಎಚ್.ಎಲ್. ಶೇಖರ್ ನಾಯ್ಕ, ಶಶಿಧರ್ ಜಾಜೂರು, ಸಿದ್ದೇಶ್, ಉಮೇಶ್ ಕಾಟಿಕೆರೆ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಮೂರ್ತಿ ಗುತ್ತಿನಕೆರೆ, ಉಮೇಶ್ ನಾಗತಿಹಳ್ಳಿ, ಚಂದ್ರಶೇಖರ್ ನಾಯ್ಕ, ರಂಗಸ್ವಾಮಿ, ಕಂದಾಯ ಇಲಾಖೆಯ ಭೂ ನ್ಯಾಯ ಮಂಡಳಿ ಸದಸ್ಯ ಕರಿಯಪ್ಪ ನಾಗವೇದಿ, ಸೆಸ್ಕ್ ಇಲಾಖೆಯ ಗ್ರಾಹಕರ ಸಲಹಾ ಸಮಿತಿ ಸದಸ್ಯರಾದ ಮಂಜುನಾಥ್ ಸಂಕೋಡನಹಳ್ಳಿ, ಮಂಜುನಾಥ್ ಮಲ್ಲೀದೇವಿಹಳ್ಳಿ, ಜಾಜೂರು, ಕಾಟಿಕೆರೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net