ಬಲವಾದ ಭಕ್ತಿಯಿಂದ ಭಗವಂತನ ಕೃಪಾಕಟಾಕ್ಷ

pdb
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಭಕ್ತಿ ಶ್ರದ್ಧೆ ಬಲವಾದಾಗ ದೇವರು ಒಲಿಯುತ್ತಾರೆ. ಭವ್ಯ ದೇಗುಲ ನಿರ್ಮಾಣದಿಂದ ಅನೇಕ ವರ್ಷದ ತಪಸ್ಸು ಈಡೇರಿದೆ ಎಂದು ಪುಣೆ ಬಂಟರ ಸಂಘ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು ಹೇಳಿದರು.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾಪನೆ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ವಿಶ್ವ ದೇವಾಡಿಗ ಮಹಾಮಂಡಲ ಅಧ್ಯಕ್ಷ ಧರ್ಮಪಾಲ ದೇವಾಡಿಗ ಹಾಗೂ ದ.ಕ ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಮಾತನಾಡಿದರು.

ಶ್ರೀ ಹೊಸ ಮಾರಿಗುಡಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ ಧಾರ್ಮಿಕ ಸಭೆ ಉದ್ಘಾಟಿಸಿದರು. ನಟರಾಜ್ ಪರ್ಕಳ ಬರೆದ ನವದುರ್ಗ ಚರಿತಂ ಪುಸ್ತಕವನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಬಿಡುಗಡೆಗೊಳಿಸಿದರು.

ಶ್ರೀ ಕ್ಷೇತ್ರ ಕಚ್ಚೂರು ಆಡಳಿತ ಮಂಡಳಿ ಧರ್ಮದರ್ಶಿ ಗೋಕುಲ್‌ದಾಸ್, ಮಲ್ಲಾರು ರಾಣೆಯಾರ್ ಸೇವಾ ಸಮಾಜ ಅಧ್ಯಕ್ಷ ನಾಗಾರ್ಜುನ ಕಾಪು, ಬೆಂಗಳೂರು ಬಂಟರ ಸಂಘ ಮಾಜಿ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಯುವರಾಜ್ ಸಾಲ್ಯಾನ್ ಮಸ್ಕತ್, ಬಂಟ್ವಳ ಬಂಟರ ಸಂಘ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ ರಂಗೋಲಿ ಉಪಸ್ಥಿತರಿದ್ದರು.

ಯೋಗೀಶ್ ಶೆಟ್ಟಿ ಸ್ವಾಗತಿಸಿದರು. ಅಶೋಕ್ ಪಕ್ಕಳ ಹಾಗೂ ದಾಮೋದರ್ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಾಣಿಶ್ರೀ ಸಾಪ್ರೆ ಮತ್ತು ಬಳಗದಿಂದ ಭಕ್ತಿ ರಸಾಯನ, ಚಂದ್ರಶೇಖರ್ ಸುವರ್ಣ ಎರ್ಮಾಳ್ ಅವರಿಂದ ಸುಗಮ ಸಂಗೀತ, ಸುಧೀರ್ ಕೊಡವೂರು ಮತ್ತು ಮಾನಸಿ ಸುಧೀರ್ ಬಳಗದ ನೃತ್ಯನಿಕೇತನ ಕಲಾವಿದರಿಂದ ನವದುರ್ಗೆ ಮತ್ತು ನಾರಸಿಂಹ ನೃತ್ಯರೂಪಕ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net