ವಿಜಯವಾಣಿ ಸುದ್ದಿಜಾಲ ಆರ್ಡಿ
ಭಾರತದಲ್ಲಿ ಆಧ್ಯಾತ್ಮಿಕತೆ ಅದ್ಭುತ ಶಕ್ತಿ ಹೊಂದಿದೆ. ಪರಕೀಯರ ಹಲವಾರು ದಾಳಿ, ಅಕ್ರಮಣಗಳ ನಡುವೆಯೂ ಜಗತ್ತಿನಲ್ಲಿ ಕುಗ್ಗದೇ ಸ್ಥಿರವಾಗಿ ನಿಂತಿದೆ. ನಮ್ಮ ಶ್ರೇಷ್ಠ ಧರ್ಮ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಎಲ್ಲರ ಹೊಣೆಗಾರಿಕೆ ಮಹತ್ವದ್ದು ಎಂದು ವಾಗ್ಮಿ ಹಾರಿಕಾ ಮಂಜುನಾಥ ಬೆಂಗಳೂರು ಹೇಳಿದರು.
ಆರ್ಡಿ ಸಮೀಪದ ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ ದೇವಳ ವಾರ್ಷಿಕ ಕೆಂಡೋತ್ಸವ, ಜಾತ್ರಾ ಮಹೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಾರಿಕಾ ಮಂಜುನಾಥ ಬೆಂಗಳೂರು ಅವರನ್ನು ದೇವಳದ ಪರವಾಗಿ ಸೂರ್ಯ ಶೋಭಾ ಶೆಟ್ಟಿ ಸನ್ಮಾನಿಸಿದರು.
ಉದ್ಯಮಿ ಬಿ.ಗಣೇಶ್ ಕಿಣಿ ಬೆಳ್ವೆ, ಬೇಳೂರು ಶ್ರೀ ದುರ್ಗಾಪರಮೇಶ್ವರಿ ಕನ್‌ಸ್ಟ್ರಕ್ಷನ್ ಉದ್ಯಮಿ ಪ್ರವೀಣ್‌ಕುಮಾರ್ ಶೆಟ್ಟಿ, ಪ್ರಭಾಕರ ನಾಯ್ಕ ಕಲ್ಮರ್ಗಿ, ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ಚಂದ್ರ ಹೆಗ್ಡೆ ಕೊಂಜಾಡಿ, ಸದಸ್ಯ ಶರತ್ ಶೆಟ್ಟಿ ಕೊಂಜಾಡಿ, ಆನಂದ ಶೆಟ್ಟಿ ನೀರ‌್ಗಡಿಗೆ ಉಪಸ್ಥಿತರಿದ್ದರು. ಗಣೇಶ್ ಆಚಾರ್ಯ ಕೊಂಜಾಡಿ ಸ್ವಾಗತಿಸಿದರು. ಗಣೇಶ್ ಅರಸಮ್ಮಕಾನು, ಶಿಕ್ಷಕಿ ಸುಪ್ರೀತಾ ಆರ್ಡಿ ನಿರೂಪಿಸಿದರು. ಸುದರ್ಶನ ಶೆಟ್ಟಿ ಆರ್ಡಿ ವಂದಿಸಿದರು.
ತಾಯಂದಿರು ಮಕ್ಕಳಿಗೆ ಧರ್ಮ ಸಂಸ್ಕಾರದ ಬಗ್ಗೆ ಹೆಚ್ಚಿನ ಅರಿವು ಮೂಡಿಸಿದಾಗ ಮುಂದಿನ ಯುವ ಪೀಳಿಗೆ ಸಂದರ್ಭ ಭಾರತ ರಾಮರಾಜ್ಯವಾಗಲಿದೆ. ಜಗತ್ತಿನಲ್ಲಿ ಮನುಕುಲದ ಒಳಿತಿಗಾಗಿ ಋಷಿ ಮುನಿಗಳು ನೀಡಿದ ಕೊಡುಗೆಗಳು ಶ್ರೇಷ್ಠವಾಗಿವೆ. ನಮ್ಮ ಧರ್ಮ ಸಂಸ್ಕೃತಿ, ಆಚರಣೆಗಳ ಬಗ್ಗೆ ಅನ್ಯರ ಅಪವಾದಗಳು ಸಲ್ಲದು.
ಹಾರಿಕಾ ಮಂಜುನಾಥ ಬೆಂಗಳೂರು, ವಾಗ್ಮಿ