ಸಸಿ ಮರವಾಗುವವರೆಗೂ ಕಾಳಜಿ ಮಾಡಿ: ಶಾಸಕ ಆರ್.ಬಸನಗೌಡ ತುರ್ವಿಹಾಳ ಕಿವಿಮಾತು

envirolment
ಮಸ್ಕಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನ ಕಾರ್ಯಕ್ರಮದಲ್ಲಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಸಸಿಗೆ ನೀರುಣಿಸಿದರು.
Published on

ಮಸ್ಕಿ: ನಿತ್ಯವೂ ಪರಿಸರದ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ ಕಾಡು ಉಳಿಯುತ್ತದೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಪರಿಸರ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಿಡಗಳನ್ನು ಬೆಳೆಸಲು ಯಾರೂ ಮುಂದಾಗುತ್ತಿಲ್ಲ.

ಪರಿಸರ ದಿನದಂದು ಆಕರ್ಷಕ ಘೋಷಣೆಗಳನ್ನು ಕೂಗುತ್ತೇವೆ. ಆದರೆ ಮರ ಗಿಡಗಳನ್ನು ಬೆಳೆಸಲು ಯಾರೂ ಮುಂದಾಗುತ್ತಿಲ್ಲ. ಒಂದೇ ದಿನ ಸಸಿ ನೆಡುವುದಕ್ಕೆ ಸೀಮಿತರಾಗದೇ ಅವುಗಳ ಪರಿಪೂರ್ಣ ಬೆಳವಣಿಗೆ ಬಗ್ಗೆ ಗಮನಹರಿಸಿ ಬೆಳಸಬೇಕು. ಆಗ ಮಾತ್ರ ಪರಿಸರ ದಿನಾಚರಣೆಗೆ ಅರ್ಥ ಬರುತ್ತದೆ. ನೆಟ್ಟ ಸಸಿಗಳನ್ನು ಮರವಾಗುವವರೆಗೂ ಕಾಳಜಿ ಮಾಡಿ ಬೆಳೆಸಬೇಕು ಎಂದರು.
ಪ್ರಮುಖರಾದ ಮಲ್ಲಯ್ಯ ಮುರಾರಿ, ಕೃಷ್ಣ ಡಿ.ಚಿಗರಿ, ವೀರೇಶ ಆನಾಹೊಸರು, ರಾಜಸಾಬ್ ಮೌನೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net