ಪರಿಸರ ದಿನಾಚರಣೆ ಅಂಗವಾಗಿ ಸ್ವಚ್ಛತಾ ಕಾರ್ಯ

7adarshkdga7
Published on

ಮಡಿಕೇರಿ: ವಿಶ್ವ ಪರಿಸರ ದಿನಾಚರಣೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಟಾಟಾ ಕಾಫಿ ಲಿಮಿಟೆಡ್ ಆನಂದಪುರ ತೋಟದ ಹಿರಿಯ ವ್ಯವಸ್ಥಾಪಕ ಎಲ್.ವಿನಯ್‌ರವರ ಉಪಸ್ಥಿತಿಯಲ್ಲಿ ದುಬಾರೆ ಸಮೀಪವಿರುವ ಕಾವೇರಿ ನದಿಯ ದಡದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.


ಈ ಸಂದರ್ಭ ಪ್ಲಾಸ್ಟಿಕ್, ಗಾಜಿನ ಬ್ಯಾಟಲ್ ಹಾಗೂ ಪ್ಲಾಸ್ಟಿಕ್ ಮತ್ತು ಕಾಗದ ಚೂರುಗಳನ್ನು ಸ್ವಚ್ಛತೆ ಮಾಡಿ ಬೆರ್ಪಡಿಸಿ ಅಲ್ಲಿಂದ ಕಸವನ್ನು ವಿಲೇವಾರಿ ಮಾಡಲಾಯಿತು. ನಂತರ ಆನಂದಪುರ ವಿಭಾಗದಿಂದ ಇಂಜಿಲಗೆರೆಯವರೆಗೂ ರಸ್ತೆ ಬದಿಯಲ್ಲಿ ಎಸೆದಿರುವ ವಸ್ತುಗಳನ್ನು ಬೇರ್ಪಡಿಸಿ ಅಮ್ಮತಿಯ ಗ್ರಾಮ ಪಂಚಾಯಿತಿಗೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net