ವರ್ಷವಾದರೂ ಬರಲೇ ಇಲ್ಲ ಸಂಬಳ; ಡೆತ್​ ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಕಾರ್ಯದರ್ಶಿ

sucide
Published on

ದಾವಣಗೆರೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಗೆ ಒಂದು ವರ್ಷದಿಂದ ಕೆಲಸ ಮಾಡಿದರೂ ಸಂಬಳ ಸಿಗದ ಹಿನ್ನೆಲೆ ಆತ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆ ತಾಲೂಕಿನ ಶ್ಯಾಗಲೆಯಲ್ಲಿ ನಡೆದಿದೆ.

ಶ್ಯಾಗಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಚಂದ್ರಪ್ಪ ನೇಣಿಗೆ ಕೊರಳೊಡ್ಡಿದ ವ್ಯಕ್ತಿ. ಅವರ ಮೇಲೆ ಸೊಸೈಟಿಯಲ್ಲಿ ಹಣ ದುರ್ಬಳಕೆ ಮಾಡಿದ್ದ ಆರೋಪವಿತ್ತು ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಕೆಲಸ ಮಾಡಿದರೂ ಸಂಬಳ ಕೊಟ್ಟಿಲ್ಲ. ಸಂಬಳ ಕೊಡಬೇಕೆಂದರೆ ಒಂದು ಲಕ್ಷ ರೂಪಾಯಿ ಕೊಡು ಎಂದು ಕ್ಲರ್ಕ್ ಜಗದೀಶ್ ಬೇಡಿಕೆ ಇಟ್ಟಿದ್ದ. ಅದರಲ್ಲಿ 20 ಸಾವಿರ ರೂಪಾಯಿಯನ್ನು ಕೊಟ್ಟಿದ್ದ ಚಂದ್ರಪ್ಪ ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಾಯುವುದಕ್ಕೂ ಮುನ್ನ ಚಂದ್ರಪ್ಪ ಡೆತ್​ ನೋಟ್​ ಬರೆದಿಟ್ಟಿದ್ದಾನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಹಣ ದುರ್ಬಳಕೆ ಮಾಡಿಲ್ಲ ಎಂದು ಬರೆದಿದ್ದಾನೆ ಎನ್ನಲಾಗಿದೆ. ಈ ಪ್ರಕರಣ ಹದಡಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net