

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ದೇಶದಲ್ಲಿ ಸಿಗುವ ಕೆಲವೊಂದು ಜನಪ್ರಿಯ ಆಹಾರ ಮತ್ತು ಪಾನೀಯ ಪೊಟ್ಟಣಗಳ ಮೇಲೆ ಕೂಡಾ ಕಂಬಳ ಕೋಣಗಳ ಓಟದ ಚಿತ್ರ ಅಳವಡಿಸುವಷ್ಟರ ಮಟ್ಟಿಗೆ ಗ್ರಾಮೀಣ ರೈತರ ಕಂಬಳ ಕ್ರೀಡೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನರನ್ನು ಆಕರ್ಷಿಸುತ್ತಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ. ಅಭಿಪ್ರಾಯಪಟ್ಟರು.
ಸಿದ್ದಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆಯಲ್ಲಿ ಭಾನುವಾರ ಎರಡನೇ ವರ್ಷದ ಕಿರಿಯ ಮತ್ತು ಸಬ್ ಜೂನಿಯರ್ ವಿಭಾಗದ ರೋಟರಿ ಕಂಬಳ ಉದ್ಘಾಟಿಸಿ ಮಾತನಾಡಿದರು.
ಲೊರೆಟ್ಟೋ ಹಿಲ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎಂ.ಪದ್ಮರಾಜ್ ಬಲ್ಲಾಳ್ ಕಂಬಳ ಕರೆ ಉದ್ಘಾಟಿಸಿದರು. ಶಾಸಕ ರಾಜೇಶ್ ನಾಕ್ ಉಳಿಪಾಡಿ ಶುಭಹಾರೈಸಿದರು. ಮಾಜಿ ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ್ ಅಧ್ಯಕ್ಷತೆ ವಹಿಸಿದ್ದರು. ಎಡಿಶನಲ್ ಎಸ್ಪಿ ಅನಿಲ್‌ಕುಮಾರ್ ಬೊಮ್ಮರೆಡ್ಡಿ, ಸಿದ್ದಕಟ್ಟೆ ಕೊಡಂಗೆ ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ, ಕಕ್ಯಪದವು ಮೈರ ಕಂಬಳ ಸಮಿತಿ ಅಧ್ಯಕ್ಷ ಸುದರ್ಶನ್ ಬಜ, ರೋಟರಿ ಸಹಾಯಕ ಗವರ್ನರ್ ಡಾ.ಎ.ಜಯ ಕುಮಾರ ಶೆಟ್ಟಿ, ಪ್ರಮುಖರಾದ ಉಮೇಶ್ ರಾವ್ ಮಿಜಾರು, ಕೆ.ಪದ್ಮನಾಭ ರೈ ಕಲ್ಲಡ್ಕ, ಡಾ.ರಾಜಾರಾಂ ಉಪ್ಪಿನಂಗಡಿ, ಡಾ.ದೇವದಾಸ್ ರೈ, ನಾರಾಯಣ ಹೆಗ್ಡೆ, ಡಾ.ಶಿವಪ್ರಕಾಶ್, ವಿಜಯ ಫರ್ನಾಂಡಿಸ್, ಅವಿಲ್ ಮಿನೇಜಸ್, ಬಸ್ತಿ ಮಾಧವ ಶೆಣೈ, ದುರ್ಗಾದಾಸ್ ಶೆಟ್ಟಿ ಕರಿಂಕಿಜೆ, ಪ್ರೀಮಾ ವೈಲೆಟ್ ಫರ್ನಾಂಡಿಸ್, ಭಾಸ್ಕರ ರೈ ಕಟ್ಟ, ಶ್ರುತಿ ಮಾಡ್ತಾ, ಡಾ.ಆತ್ಮರಂಜನ್ ರೈ, ಗಣೇಶ್ ಶೆಟ್ಟಿ ಸಿದ್ದಕಟ್ಟೆ, ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಜಾನ್ ಕೆನ್ಯೂಟ್ ಮಸ್ಕರೆನ್ಹಸ್ ಉಪ್ಪಿನಂಗಡಿ, ಡಾ.ಪ್ರಹ್ಲಾದ್ ಮೈಸೂರು, ಪುಷ್ಪರಾಜ ಹೆಗ್ಡೆ, ಕಿರಣ್ ಹೆಗ್ಡೆ ಮಾಣಿ, ಕಿರಣ್ ಕುಮಾರ್ ಮಂಜಿಲ, ಮೈಕಲ್ ಡಿಕೋಸ್ತ, ಮೋಹನ್ ಕೆ.ಶ್ರೀಯಾನ್ ರಾಯಿ, ಮೊಹಮ್ಮದ್ ಯಾಸೀರ್ ಕಲ್ಲಡ್ಕ ಮತ್ತಿತರರಿದ್ದರು.
ಎಲಿಯಾಸ್ ಸಾಂಕ್ಟೀಸ್ ಸ್ವಾಗತಿಸಿದರು. ರಾಜಗೋಪಾಲ್ ರೈ ವಂದಿಸಿದರು. ಸುರೇಶ್ ಶೆಟ್ಟಿ ಸಿದ್ದಕಟ್ಟೆ ಮತ್ತು ರಾಘವೇಂದ್ರ ಭಟ್ ನಿರೂಪಿಸಿದರು. ಲೊರೆಟ್ಟೋ ಹಿಲ್ಸ್ ಸಹಿತ ಬಂಟ್ವಾಳ, ಮಂಗಳೂರು ಸೆಂಟ್ರಲ್ ಮತ್ತು ಸಿದ್ದಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಸಹಯೋಗ ವಹಿಸಿದ್ದವು.