

ತುಮಕೂರು: ದ್ವೀತಿಯ ಪಿಯು ವಿದ್ಯಾರ್ಥಿನಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ನಗರದ ಸಿದ್ಧಾರ್ಥ ಪದವಿಪೂರ್ವ ಕಾಲೇಜು ದ್ವೀತಿಯ ಪಿಯುಸಿ ವಿದ್ಯಾರ್ಥಿ ದೀಪಿಕಾ (19) ಗುರುವಾರ ಬೆಳಗ್ಗೆ 11.30ರಲ್ಲಿ ವಿದ್ಯಾರ್ಥಿನಿ ವಸತಿ ಶಾಲೆಯ ಮಹಡಿ ಮೇಲೆ ನೀರಿನ ಟ್ಯಾಂಕ್ಗೆ ಹತ್ತುವ ಏಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಶಿರಾ ತಾಲೂಕು ಕುಂಟೆಗೌಡನಪಾಳ್ಯದ ದೀಪಿಕಾ ಸಿದ್ಧಾರ್ಥ ಕಾಲೇಜಿನಲ್ಲಿ ದ್ವೀತಿಯು ಪಿಯುಸಿ ಪಿಸಿಎಂಸಿ ವಿಭಾಗದಲ್ಲಿ ಓದುತ್ತಿದ್ದು ಕನ್ನಡ, ಗಣಿತ ಪರೀಕ್ಷೆ ಬರೆದಿದ್ದಳು. ಶುಕ್ರವಾರ ಭೌತಶಾಸ್ತ್ರ ಪರೀೆ ಇತ್ತು. ವಸತಿ ಶಾಲೆಯ ಕೊಠಡಿಯಲ್ಲಿ ಪರೀಕ್ಷೆಗೆ ಓದುಕೊಳ್ಳುತ್ತಿದ್ದ ದೀಪಿಕಾ ಮಹಡಿ ಮೇಲೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು ಎಷ್ಟು ಹೊತ್ತಾದರು ಬಾರದೆ ಇದ್ದಾಗ ಉಪನ್ಯಾಸಕರು ಮೇಲೆ ಹೋಗಿ ನೋಡಿದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಅಷ್ಟರೊಳಗೆ ಆಕೆ ಮೃತಪಟ್ಟಿದ್ದಳು.
ದೀಪಿಕಾ ಬರೆದಿಟ್ಟ ಡೆತ್ ನೋಟ್ ಸಿಕ್ಕಿದ್ದು ನನ್ನ ಸಾವಿಗೆ ಯಾರು ಕಾರಣವಿಲ್ಲ ಎಂದು ಬರೆದಿದ್ದಾಳೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಪಾಲಕರಿಗೆ ಒಪ್ಪಿಸಲಾಗಿದೆ.