ಎಸ್‌ಡಿಎಂ ಪದವಿಪೂರ್ವ ಕಾಲೇಜಿಗೆ ಸಮಗ್ರ ದ್ವಿತೀಯ ಬಹುಮಾನ

winner
Published on

ಬೆಳ್ತಂಗಡಿ: ಉಜಿರೆಯ ಎಸ್‌ಡಿಎಂ ಪಿಯು ಕಾಲೇಜಿನ ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳು ಉಜಿರೆಯ ಎಸ್‌ಡಿಎಂ ಸ್ವಾಯತ್ತ ಕಾಲೇಜು ಆಯೋಜಿಸಿದ್ದ ಪಿನಾಕಲ್ ಉತ್ಸವದ ಅಂತರ್ ಕಾಲೇಜು ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಸ್ಪರ್ಧೆಗಳಲ್ಲಿ ಸಮಗ್ರ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.

ಕಾರ್ಯಕ್ರಮ ನಿರ್ವಹಣೆಯ ಸ್ಪರ್ಧೆಯಲ್ಲಿ ಅನಂತಕೃಷ್ಣ ಮತ್ತು ಅಕ್ಷಯ್ ಪ್ರಥಮ, ಅನಾರ್ಕಲಿ ನೃತ್ಯ ಸ್ಪರ್ಧೆಯಲ್ಲಿ ಪ್ರಿಯದರ್ಶಿನಿ ಮತ್ತು ತಂಡ ಪ್ರಥಮ, ಜಾಹೀರಾತು ಸ್ಪರ್ಧೆಯಲ್ಲಿ ವಿಬಿನ್ ಮತ್ತು ತಂಡ ಪ್ರಥಮ ಮತ್ತು ಪಾರ್ಥ್ ಮತ್ತು ತಂಡಕ್ಕೆ ದ್ವಿತೀಯ, ಮಾನವ ಸಂಪನ್ಮೂಲ ನಿರ್ವಹಣೆ ಸ್ಪರ್ಧೆಯಲ್ಲಿ ರೋಹಿತ್ ಮತ್ತು ತಂಡ ಎರಡನೇ ಬಹುಮಾನ ಪಡೆದುಕೊಂಡಿದೆ.

ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಬೇಬಿ ಎನ್.ಹಾಗೂ ಉಪನ್ಯಾಸಕಿಯರಾದ ಸವಿತಾ, ಪ್ರಭಾವತಿ, ಶೋಭಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ಪ್ರಾಂಶುಪಾಲ ಪ್ರಮೋದ್ ಕುಮಾರ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net