ಕಾಣೆಯಾದಾತನಿಗೆ ಹೊಳೆಯಲ್ಲಿ ಹುಡುಕಾಟ

kumara
ಕಾಣೆಯಾಗಿರುವ ಕುಮಾರ
Published on

ಸುಳ್ಯ: ನಗರದ ಕುರುಂಜಿ ಗುಡ್ಡೆ ನಿವಾಸಿ ಕುಮಾರ(36) ಎಂಬುವರು ಜೂನ್ 23ರ ಮಧ್ಯಾಹ್ನದಿಂದ ಕಾಣೆಯಾಗಿದ್ದಾರೆ. ಮಂಗಳವಾರ ಬಸ್ಮಡ್ಕ ಹೊಳೆ ದಡದಲ್ಲಿ ಇವರ ಚಪ್ಪಲಿ ಸಿಕ್ಕಿದ್ದು ಹೊಳೆಗೆ ಬಿದ್ದಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಹೊಳೆಯಲ್ಲಿ ಹುಡುಕಾಟ ನಡೆಸಿದರೂ ಸಂಜೆಯವರೆಗೆ ಪತ್ತೆಯಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net