ಎಸ್‌ಡಿಪಿಐ ವಿರುದ್ಧ ಕಾನೂನು ಕ್ರಮಕ್ಕೆ ಹಿಂದು ಜನಜಾಗೃತಿ ಸಮಿತಿ ಆಗ್ರಹ

mng-10mar-hindu
ಹಿಂದು ಜನಜಾಗೃತಿ ಸಮಿತಿ ವತಿಯಿಂದ ಡಿಸಿಪಿ ಅಶುತೋಷ್ ಅವರಿಗೆ ಮನವಿ ಸಲ್ಲಿಸಲಾಯಿತು.
Published on

ಮಂಗಳೂರು: ಕೋಮುದ್ವೇಷ ಬಿತ್ತುವ ಎಸ್‌ಡಿಪಿಐ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಹಿಂದು ಜನಜಾಗೃತಿ ಸಮಿತಿ ವತಿಯಿಂದ ಡಿಸಿಪಿ ಅಶುತೋಷ್ ಅವರಿಗೆ ಮನವಿ ಸಲ್ಲಿಸಲಾಯಿತು.ಜನಜಾಗೃತಿ ಸಮಿತಿ ಸಮನ್ವಯಕಾರ ಚಂದ್ರ ಮೊಗೇರ, ಮಧುಸೂದ ಅಯರ್, ದಿನೇಶ್, ಎಂ.ಪಿ.ಲೋಕೇಶ್ ಮನವಿ ನೀಡಿದ ನಿಯೋಗದಲ್ಲಿರಿದ್ದರು.

ಹಿಂದು ಜನಜಾಗೃತಿ ಸಮಿತಿ ಈವರೆಗೆ ಸಮಿತಿ ದೇಶದಾದ್ಯಂತ 2300 ಸಭೆಗಳ ಆಯೋಜನೆ ಮಾಡಿ 25 ಲಕ್ಷ ಹಿಂದುಗಳಲ್ಲಿ ಧರ್ಮಜಾಗೃತಿ ಮೂಡಿಸಿದೆ. ಇದುವರೆಗೆ ಯಾವುದೇ ಅಹಿತಕರ ಘಟನೆಯಾಗಿಲ್ಲ. ಇಸ್ಲಾಮಿಕ್ ಮತಾಂಧ ಪಕ್ಷವಾದ ಎಸ್‌ಡಿಪಿಐ ಹಿಂದು ಮತ್ತು ಮುಸಲ್ಮಾನರ ಬಗ್ಗೆ ಕೋಮು ಭಾವನೆ ಕೆರಳಿಸಲು ಸಭೆ ಬಗ್ಗೆ ಸಮಾಜದಲ್ಲಿ ಅಪಪ್ರಚಾರ ಮಾಡುತ್ತಿದೆ. ರಾಜ್ಯದಲ್ಲಿ ಪ್ರವೀಣ ನೆಟ್ಟಾರು ಸೇರಿ ಹಲವು ಹಿಂದು ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಕೋಮುದ್ವೇಷ ಬಿತ್ತುವ ಎಸ್‌ಡಿಪಿಐ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net