ಕಂಪನಿ ಸೆಕ್ರೆಟರಿ ಪ್ರವೇಶ ಪರೀಕ್ಷೆಯಲ್ಲಿ ಎಸ್‌ಡಿಎಂ ಸಾಧನೆ

Published on

ಬೆಳ್ತಂಗಡಿ: ಅಖಿಲ ಭಾರತೀಯ ಕಂಪನಿ ಸೆಕ್ರೆಟರಿ ಸಂಸ್ಥೆ ನಡೆಸಿದ ಕಂಪನಿ ಸೆಕ್ರೆಟರಿ ಪ್ರವೇಶ ಪರೀಕ್ಷೆಯಲ್ಲಿ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮೂಲಕ ಪರೀಕ್ಷೆ ಬರೆದ ಏಳು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಪರೀಕ್ಷೆಗೆ ಹಾಜರಾದ ರೋಹಿತ್, ಓಜಸ್ ಬಿ.ಕದಂಬಿ, ಗೌತಮಿ ಶೆಟ್ಟಿ, ಅನನ್ಯಾಲಕ್ಷ್ಮೀ, ಪ್ರಾಪ್ತಿ ಪಿ.ಹೆಗ್ಡೆ, ಸಹನಾ ಆರ್.ಕುರ್ಲಿ ಹಾಗೂ ಕುಶಲ ತೇರ್ಗಡೆ ಹೊಂದಿದ್ದಾರೆ. ಸಾಧಕರಿಗೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್, ಪ್ರಾಂಶುಪಾಲರಾದ ಪ್ರಮೋದ್ ಕುಮಾರ್ ಬಿ. ಹಾಗೂ ಉಪನ್ಯಾಸಕರು ಶುಭ ಹಾರೈಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net