

ಕಡಬ: ಕೌಕ್ರಾಡಿ ಗ್ರಾ.ಪಂ ಕಾಪಿನ ಬಾಗಿಲು ಎಂಬಲ್ಲಿ ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ ಸಂಬಂಧಿಸಿ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಬುಧವಾರ ಕಡಬ ತಹಶೀಲ್ದರ್ ಕಚೇರಿ ಮುಂದೆ ಪ್ರತಿಭಟನೆ ಆರಂಭಗೊಂಡಿದೆ.
ಸಾಮಾಜಿಕ ಹೋರಾಟಗಾರ ಜಯಂತ್ ಟಿ ಅವರು ನೇತೃತ್ವ ವಹಿಸಿದ್ದು ತಹಶೀಲ್ದಾರ್ ಕಚೇರಿ ಪಕ್ಕದ ರಸ್ತೆ ಬದಿ ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ವೃದ್ದ ದಂಪತಿಗಳು ನಜ್ಜುಗುಜ್ಜುಗೊಂಡ ಪಾತ್ರೆ ಪರಿಕರಗಳ ಜೊತೆ ಆಗಮಿಸಿ ಉರಿ ಬಿಸಿಲಿನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ . ಸಮಾನ ಮನಸ್ಕರು ಪ್ರತಿಭಟನೆ ಕೈ ಜೋಡಿಸಿದ್ದಾರೆ.
ಮನೆ ಕಳೆದುಕೊಂಡ ವೃದ್ದ ನನಗೆ ಜೀವ ಬೇಡ ಎಂದು ನೆಲದಲ್ಲಿ ಒದ್ದಾಡಿದ್ದು ಅಧಿಕಾರಿಗಳು ಮೂಕಪ್ರೇಕ್ಷಕರಾಗಿ ನೋಡುತ್ತಿರುವುದು ಕಂಡು ಬಂದಿದೆ. ಪ್ರತಿಭಟನೆ ಅನುಮತಿ ಇಲ್ಲ ಎಂದು ಅಧಿಕಾರಿ ವಲಯದಿಂದ ಮಾತು ಕೇಳಿ ಬಂದ ಹಿನ್ನೆಲೆ ಪ್ರತಿಭಟನ ಕಾರರು ಆಕೋಶಿತಗೊಂಡು ರಸ್ತೆ ಸಮೀಪ ಗುಂಪು ಸೇರಿದ್ದಾರೆ. ಬಳಿಕ ತಹಶೀಲ್ದಾರ ಕಛೇರಿ ರಸ್ತೆ ಮುಂಭಾಗದಲ್ಲಿ ಪ್ರತಿಭಟನೆ ಮುಂದುವರಿದಿದೆ.
ಮುಖಂಡರಾದ ಬಿ ಎಂ ಭಟ್ , ದಲಿತ ಮುಖಂಡೆ ಈಶ್ವರಿ,ಕಾಂಗ್ರೆಸ್ ಮುಖಂಡ ಹಕೀಂ ಮೊದಲಾದವರು ಭಾಗವಹಿಸುವ ದ್ದಾರೆ. ಪುತ್ತೂರು ನಗರ ವೃತ್ತ ನಿರೀಕ್ಷಕ ಜಾನ್ಸನ್ ಡಿಸೋಜ, ಕಡಬ ಠಾಣಾ ಎಸ್.ಐ ಗಳಾದ ಅಭಿನಂದನ್ , ಅಕ್ಷಯ ಡವಗಿ ನೇ ತೃತ್ವದಲ್ಲಿ ಪೊಲೀಸರು ಬಂದೊ ಬಸ್ತು ಒದಗಿಸಿದ್ದಾರೆ. ಕಡಬ, ಸುಳ್ಯ,ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಬಂದೊ ಬಸ್ತಿನಲ್ಲಿ ದ್ದಾರೆ.