

ಯಾದಗಿರಿ : ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪೂರ ಸಚಿವರ ಅಧ್ಯಕ್ಷತೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಎರಡನೇಯ ಕಲ್ಯಾಣ ಕರ್ನಾಟಕ ಜಾಂಬೋರೇಟ್‌ನ ಪೂರ್ವಸಿದ್ಧತಾ ಸಭೆಯನ್ನು ಆಯೋಜಿಸಲಾಗಿದೆ ಎಂದು ಯಾದಗಿರಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ತಿಳಿಸಿದ್ದಾರೆ.
ಅಂದು 2025ರ ಜನವರಿ 4 ರಂದು ಯಾದಗಿರಿ ಜಿಲ್ಲಾಡಳಿತ ಭವನ (ಮಿನಿ ವಿಧಾನಸೌಧ) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2024-25ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಎರಡನೇಯ ಕಲ್ಯಾಣ ಕರ್ನಾಟಕ ಜಾಂಬೋರೇಟ್‌ನ ಪೂರ್ವಸಿದ್ಧತಾ ಸಭೆಗೆ ಜಿಲ್ಲಾ ಮಟ್ಟದ ಸಂಬAಧಿಸಿದ ಎಲ್ಲಾ ಅಧಿಕಾರಿಗಳು ತಮ್ಮ ಪ್ರತಿನಿಧಿಯನ್ನು ನಿಯೋಜಿಸದೆ ತಾವೇ ಕಡ್ಡಾಯವಾಗಿ ಹಾಜರಾಗುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ