ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸಿ : ವಿಜ್ಞಾನಿ ಡಾ.ರಾಮನಗೌಡ ನಾಡಗೌಡ ಕಿವಿ ಮಾತು

Bhagavati
Published on

ವಿವೇಕಾನಂದ ವಿದ್ಯಾನಿಕೇತನ ಶಾಲೆಯಲ್ಲಿ ವಿಶೇಷ ಉಪನ್ಯಾಸ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸಿದವರನ್ನು ಮಾತ್ರ ಪ್ರಪಂಚ ಸ್ಮರಿಸುತ್ತದೆ. ದೇಶದ ಬಹು ದೊಡ್ಡ ಋಣ ನಮ್ಮ ಮೇಲಿರುತ್ತದೆ. ಅದಕ್ಕಾಗಿ ಶ್ರಮಿಸುವುದು ನಮ್ಮ ಕರ್ತವ್ಯವಾಗಬೇಕು ಎಂದು ಇಸ್ರೋ ವಿe್ಞÁನಿ ಡಾ.ರಾಮನಗೌಡ ನಾಡಗೌಡ ಹೇಳಿದರು.

ನಗರದ ವಿವೇಕಾನಂದ ವಿದ್ಯಾನಿಕೇತನ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಂತರಿP್ಷÀ ಸಂಶೋಧನಾ ಕ್ಷೇತ್ರದಲ್ಲಿ ಅವಕಾಶಗಳು ಎಂಬ ವಿಷಯ ಕುರಿತು ಬುಧವಾರ ಅಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಣ ಹಾಗೂ ಕಟ್ಟಡದ ಕೊರತೆ ಇದ್ದ ಸಮಯದಲ್ಲಿ ನಮ್ಮ ವಿe್ಞÁನಿಗಳು ತಿರುವನಂತಪುರದ ಚರ್ಚ್ ಕಟ್ಟಡದಲ್ಲಿ ಸೆಟಲೈಟ್ ನಿರ್ಮಾಣ ಆರಂಭಿಸಿ, ಇಂದು ಪ್ರಪಂಚ ಬೆರಗಾಗುವ ಮಟ್ಟಿಗೆ ಯಶಸ್ಸು ಸಾಧಿಸಿz್ದÁರೆ. ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಿಲ್ಲ ಎಂಬುದಕ್ಕೆ ಇದು ಉತ್ತಮ ಉದಾಹರಣೆ. ಸಾಧನೆ ಮಾಡಬೇಕೆಂಬ ಛಲ ಇದ್ದರೆ ಆಕಾಶದಾಚೆಗೂ ಅವಕಾಶಗಳಿವೆ ಎಂದರು.

ಈವರೆಗೆ ಇಸ್ರೋ ಸಂಸ್ಥೆ ಸುಮಾರು ೨೫೦ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸೇವೆ ನೀಡುವ, ೧೨೭ ಸೆಟಲೈಟ್, ೯೭ ಉಡಾವಣಾ ವಾಹನ ನಿರ್ಮಿಸಿದೆ. ೩೪ ದೇಶದ ಒಟ್ಟು ೪೩೨ ಸೆಟಲೈಟ್‌ಗಳನ್ನು ಅತಿ ಕಡಿಮೆ ಖರ್ಚಿನಲ್ಲಿ ಯಶಸ್ವಿಯಾಗಿ ಅಂತರಿP್ಷÀಕ್ಕೆ ಸೇರಿಸಿದ ಹೆಮ್ಮೆ ಇಸ್ರೋ ಸಂಸ್ಥೆಗೆ ಸೇರುತ್ತದೆ ಎಂದರು.

ದುಡ್ಡು ಮಾಡುವ ಉz್ದೆÃಶದಿಂದ ಕೇವಲ ಡಾಕ್ಟರ್, ಇಂಜಿನಿಯರ್ ಆಗಲು ಬಯಸದೆ, ತಮ್ಮ ಆಸಕ್ತಿಗಣುಗುಣವಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು, ದೇಶಕ್ಕೆ ತಮ್ಮ ಸೇವೆ ಸಲ್ಲಿಸಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.

ವಿವೇಕಾನಂದ ಶಿP್ಷÀಣ ಸಂಸ್ಥೆಯ ಅಧ್ಯಕ್ಷೆ ಸುವರ್ಣ ಭಗವತಿ ಅವರು ಡಾ.ನಾಡಗೌಡರಿಗೆ ಶಾಲೆಯ ವತಿಯಿಂದ ವಿವೇಕ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು. ಕ್ಯಾನ್ಸರ್ ತಜ್ಞ ಡಾ.ಜಯರಾಜ ಗುಳಶೆಟ್ಟಿ, ಶಾಲೆಯ ಪ್ರಾಚಾರ್ಯ ಸಿದ್ದಪ್ಪ ಭಗವತಿ, ಶಿP್ಷÀಣ ಸಂಯೋಜಕ ನಿಖಿಲ ಪಾಟೀಲï, ಸುಮಾ ಭಗವತಿ, ಸುಷ್ಮಾ ಭಗವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net