ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಪ್ರಜ್ಞೆ ಅವಶ್ಯ

2 RMN-MGD P2...
????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

* ಏಕದಳ ಬಿಲ್ವ ಬಂಡೇಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಹೇಳಿಕೆ

ಮಾಗಡಿ

ದೇಶ ಅತ್ಯಂತ ಸದೃಢವಾಗಿ ವಿಶ್ವವ್ಯಾಪಿ ಗುರುತಿಸಿಕೊಳ್ಳಲು ಶೈಕ್ಷಣಿಕ ವ್ಯವಸ್ಥೆ ಕಾರಣ ಎಂದು ಏಕದಳ ಬಿಲ್ವ ಬಂಡೇಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.

ಎನ್‌ಇಎಸ್ ಬಡಾವಣೆಯ ಎಸ್‌ಬಿಎಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಹೆಸರಾಯಿತು ಕರ್ನಾಟಕ 50ರ ಸಂಭ್ರಮ ನೆನಪಿಗಾಗಿ ಏರ್ಪಡಿಸಿದ್ದ ಪ್ರಥಮ ವರ್ಷದ ವಾರ್ಷಿಕೋತ್ಸವ ಹಾಗೂ ಎಲ್ಲವೂ ಕನ್ನಡದಲ್ಲಿ ಹೊಸತನದ ಆರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಭಾರತೀಯರು ಬುದ್ಧಿವಂತವರಾಗಿದ್ದು, ಶಿಕ್ಷಣದ ಮೂಲಕ ಸರ್ವವ್ಯಾಪಿಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಪ್ರಜ್ಞೆ ಅವಶ್ಯಕತೆ ಇದೆ ಎಂದರು.

ಕಳೆದ 50 ವರ್ಷದ ಹಿಂದೆ ಶಿಕ್ಷಣ ಸಂಸ್ಥೆ ಆರಂಭಿಸಿ, ಶಿಕ್ಷಣ ಸಂಸ್ಥೆ ಕಟ್ಟಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗಿದೆ. ವಿದ್ಯಾರ್ಥಿಗಳು ಇಂದು ದೇಶವ್ಯಾಪಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅದರಂತೆ ಇಂದಿನ ವಿದ್ಯಾರ್ಥಿಗಳಲ್ಲಿ ಶಿಕ್ಷಕ, ಶಿಕ್ಷಕಿಯರ ಬಗ್ಗೆ ಗೌರವ ಇರಲಿ. ಜಗತ್ತಿನಲ್ಲಿ ಕದಿಯಲಾಗದ ಸಂಪತ್ತು ವಿದ್ಯೆ ಮಾತ್ರ. ಉತ್ತಮ ವಿದ್ಯೆ ನಿಮ್ಮಲ್ಲಿದ್ದರೆ ಅದು ಭವಿಷ್ಯದಲ್ಲಿ ನಿಮ್ಮನ್ನು ಕಾಪಾಡುತ್ತದೆ ಎಂದರು.

ಜಡೇದೇವರ ಮಠದ ಶ್ರೀ ಇಮ್ಮಡಿ ಬಸವರಾಜ ಸ್ವಾಮೀಜಿ ಮಾತನಾಡಿ, ಪಠ್ಯೇತರ ಚಟುವಟಿಕೆಗಳು ಹೆಚ್ಚಿನ ಜೀವನ ಮೌಲ್ಯಗಳನ್ನು ಕಲಿಸಿಕೊಟ್ಟು ಸ್ವಾವಲಂಬಿ ಬದುಕಿಗೆ ಅಡಿಪಾಯ ಹಾಕುತ್ತದೆ. ವಿದ್ಯಾರ್ಥಿಗಳು ಆಟ, ಪಾಠದ ಜತೆಗೆ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಲಿ ಎಂದು ಸಲಹೆ ನೀಡಿದರು.

ಶಾಲೆಯ ಪ್ರಾಂಶುಪಾಲ ಲಕ್ಷ್ಮಣ್ ಮಾತನಾಡಿ, ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ 50 ವರ್ಷದ ನೆನಪಿಗಾಗಿ ವಾರ್ಷಿಕೋತ್ಸವದ ಎಲ್ಲ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ವಿಭಿನ್ನವಾಗಿ ನಡೆಸಲಾಗಿದೆ. ವಿದ್ಯಾಬ್ಯಾಸದ ಜತೆಗೆ ಸಂಸ್ಕಾರ, ಸಂಸ್ಕೃತಿಯನ್ನು ತಿಳಿಸಲಾಗುತ್ತಿದೆ ಎಂದರು.

‘ಭಾಷಣ, ನಟನೆ, ಹಾಡುಗಳು, ಸ್ವಾಗತ ‘ಭಾಷಣ ಎಲ್ಲವೂ ಕನ್ನಡಮಯವಾಗಿದ್ದು ವಿಶೇಷವಾಗಿತ್ತು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿಎನ್. ಜಯರಾಮು, ಇಸಿಒ ನಾರಾಯಣ್, ಗಂಗಾ‘ರ್, ಶಾಲೆ ಆಡಳಿತ ಮಂಡಳಿಯ ನಿರ್ದೇಶಕ ಜಗದೀಶ್, ಗುಡೇಮಾರನಹಳ್ಳಿ ಪ್ರಾಂಶುಪಾಲ ಲೋಕೇಶ್, ಸಮಯವಲ್ಲಿ, ಮುಖ್ಯಶಿಕ್ಷಕಿ ಸುಧಾ, ಭಾಗ್ಯಮ್ಮ, ಚಂದ್ರಪ್ಪ, ಕಿರಣ್ ಕುಮಾರ್, ಬಿಂದು, ಶ್ವೇತಾ, ತ್ರಿವೇಣಿ, ಉಷಾ, ಅನುಷಾ, ನಂದನ್, ಸಿದ್ದನರಸಿಂಹಯ್ಯ, ಮುಯೀನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net