ವಿಜ್ಞಾನ ಜೀವನದ ಅವಿಭಾಜ್ಯ ಅಂಗ

28Katakol1
Published on

ಕಟಕೋಳ: ಪೂರ್ವಜರು ಮಾಡುತ್ತಿದ್ದ ಪ್ರತಿಯೊಂದು ಆಚರಣೆ, ಕಾರ್ಯ ಚಟುವಟಿಕೆ ವೈಜ್ಞಾನಿಕ ದೃಷ್ಟಿಕೋನದ ಮೇಲೆ ಇರುತ್ತಿದ್ದವು. ಹೀಗಾಗಿ ವಿಜ್ಞಾನ ಜೀವನದ ಅವಿಭಾಜ್ಯ ಅಂಗ ಎಂದು ವಲಯ ಅರಣ್ಯಾಧಿಕಾರಿ ಭಾಗ್ಯಶ್ರೀ ಮಸಳಿ ಹೇಳಿದರು.

ಸಮೀಪದ ಚಂದರಗಿಯ ಎಸ್​.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಾಣಿ, ಪ ಹಾಗೂ ಅರಣ್ಯ ಸಂಪತ್ತು ಸಂರಣೆ ನಮ್ಮೆಲ್ಲರ ಹೊಣೆಯಾಗಿದೆ. ಪ್ರತಿಯೊಬ್ಬರೂ ಪರಿಸರ ಕಾಳಜಿ ಹಾಗೂ ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗಸ್ತು ಅರಣ್ಯಾಧಿಕಾರಿಗಳಾದ ಎಂ.ಎಸ್​.ತೇಲಿ, ಎ.ಐ.ಹನಸಿ ಮಾತನಾಡಿ, ಅರಣ್ಯ ಸಂಪತ್ತು, ಪರಿಸರ ಜಾಗೃತಿ ಹಾಗೂ ವಿವಿಧ ಬಗೆಯ ಸಸ್ಯ ಪ್ರಭೇದಗಳ ಮಾಹಿತಿ ನೀಡಿದರು.

ಗಮನ ಸೆಳೆದ ವಿಜ್ಞಾನ ವಸ್ತು ಪ್ರದರ್ಶನ: ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ವಿದ್ಯಾರ್ಥಿಗಳು ಸಿದ್ಧಪಡಿಸಿದ ವಿಜ್ಞಾನದ ಮಾದರಿ ಗಮನ ಸೆಳೆದವು. ಪ್ರಾಚಾರ್ಯರಾದ ಪಾಂಡುರಂಗ ಪಾಟೀಲ, ಸಂತೋಷ ಮಿರಜ್ಕರ್​, ಉಪ ಪ್ರಾಚಾರ್ಯ ಜೆ.ಬಿ.ಮೇಟಿ, ಅರಣ್ಯ ವೀಕ ಐ.ಆರ್​. ವೆಂಕಟಾಪುರ ಇತರರಿದ್ದರು. ಶಿಕ ಐ.ಜಿ.ಅಂಕಲಿ ನಿರೂಪಿಸಿದರು. ಐ.ಎಸ್​.ಸೂಳಿಭಾವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net