2ನೇ ತರಗತಿವರೆಗೆ ಶಾಲಾ ಸಮಯ ಬದಲಿಸಲು ಡಾ.ಸಿ.ಎನ್.ಮಂಜುನಾಥ್ ಸಲಹೆ

Dr.C.N.Manjunath
Published on

ತುಮಕೂರು: ಕನಿಷ್ಟ ಎರಡನೇ ತರಗತಿವರೆಗೆ ಶಾಲೆಯ ಸಮಯವನ್ನು ಬೆಳಗ್ಗೆ10 ರಿಂದ 12.30ರವರೆಗೆ ನಿಗದಿಗೊಳಿಸಬೇಕು. ಈಗಿನ ಶಾಲಾವಧಿಯಿಂದ ಮಕ್ಕಳತನ್ನವನ್ನೇ ಕಿತ್ತುಕೊಳ್ಳುವಂತಾಗಿದೆ. 7-8 ವರ್ಷದವರೆಗಿನ ಮಕ್ಕಳು ಹೆಚ್ಚು ನಿದ್ರೆ ಮಾಡಬೇಕು. ನಿದ್ರಾಹೀನತೆಯಿಂದ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತಿದೆ ಎಂದು ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಕಳವಳ ವ್ಯಕ್ತಪಡಿಸಿದರು.

ಸಿದ್ದಗಂಗಾಮಠದಲ್ಲಿ ಇಂದು ಸಿದ್ದಗಂಗಾ ಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಮಕ್ಕಳ ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯ ಜಾಲಾಡುತ್ತಿರುವುದು ಸಾಮಾಜಿಕ ಜಾಲತಾಣಗಳು. ಮೊಬೈಲ್ ಮಕ್ಕಳ, ಯುವಜನತೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಕಳೆದ 7 ವರ್ಷಗಳಲ್ಲಿ 6 ಸಾವಿರ ಯುವಕರಿಗೆ ಹೃದಯ ಚಿಕಿತ್ಸೆಯನ್ನು ಈವರೆಗೆ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಮಾಡಲಾಗಿದೆ. ಚಿಕ್ಕವಯಸ್ಸಿನಲ್ಲೇ ಒತ್ತಡ ಪ್ರಾರಂಭವಾಗುತ್ತಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಗಾಢಪರಿಣಾಮಬೀರುತ್ತಿದೆ. ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯ ಹದಗೆಡುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net