

ತುಮಕೂರು: ಶಿರಾ ತಾಲೂಕಿನ ಚಿಕ್ಕನಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಜೇನು ದಾಳಿ ನಡೆಸಿದ್ದು 20ಕ್ಕು ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ.
ಶಾಲೆಯ ಪಕ್ಕದಲ್ಲಿರುವ ತೋಟದಲ್ಲಿ ಜೇನು ಗೂಡು ಕಟ್ಟಿದ್ದು ಶುಕ್ರವಾರ ಬೆಳಗ್ಗೆ ಶಾಲೆ ಆರಂಭಕ್ಕೂ ಮುನ್ನ ಆಟವಾಡುತ್ತಿದ್ದ ಮಕ್ಕಳ ಮೇಲೆ ಏಕಾಏಕಿ ಜೇನುನೋಣಗಳು ದಾಳಿ ನಡೆಸಿವೆ. ಈ ವೇಳೆ 20 ಕ್ಕೂ ಹೆಚ್ಚು ಮಕ್ಕಳ ಬೆನ್ನು, ಕುತ್ತಿಗೆ, ಮುಖ, ತಲೆಗೆ ಜೇನು ಕಚ್ಚಿದ್ದು ಗಾಯಗೊಂಡ ವಿದ್ಯಾರ್ಥಿಗಳು ಶಿರಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಶಿರಾ ತಹಸೀಲ್ದಾರ್ ದತ್ತಾತ್ರೇಯ, ಡಿವೈಎಸ್ಪಿ ಶೇಖರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದು ಮಕ್ಕಳ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದಾರೆ.