

ತೋರಣಗಟ್ಟಿ: ನಮ್ಮ ಶಾಲೆಗೆ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಾವೆಲ್ಲರೂ ಒಗ್ಗೂಡಿ ವಿಜೃಂಭಣೆಯಿಂದ ಶತಮಾನೋತ್ಸವ ಆಚರಿಸೋಣ. ಶಾಲೆಯ ಅಭಿವೃದ್ಧಿಗೆ ಸಹಕಾರ ಅಗತ್ಯವಾಗಿದೆ ಎಂದು ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಆರ್.ಜಿ.ಶಿಂಗಾರಗೋಪ್ಪ ಹೇಳಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್.ಎನ್.ಶಿಂಗಾರಗೋಪ್ಪ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗರ್ಶನ ಪಡೆದು ಉನ್ನತ ಬದುಕು ತಮ್ಮದಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಸ್ಡಿಎಂಸಿ ಅಧ್ಯಕ್ಷ ಭೀಮಪ್ಪ ಕರ್ಲನ್ನವರ, ನಿವೃತ್ತ ಶಿಕ್ಷಕ ಕೆ.ವೈ.ಹುಣಶೀಕಟ್ಟಿ, ಶಿಕ್ಷಣ ಇಲಾಖೆ ಅಕಾರಿ ಎಸ್.ಪಿ.ಕರಲಿಂಗಪ್ಪನವರ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಮುದಗೊಂಡ, ವಿಠ್ಠಲ ಜೋಗಿ, ತಮೇಶ ಐನಾಪುರ, ಬಸವರಾಜ ಐನಾಪುರ, ಮಹದೇವ ಚಿನ್ನಾಕಟ್ಟಿ, ದುಂಡಪ್ಪ ಬಿಜಲಿ ಇತರರಿದ್ದರು. ವೈ.ವಿ.ಉಪ್ಪಾರೊಟ್ಟಿ ನಿರೂಪಿಸಿದರು. ವಿ.ಪಿ.ಹೊಸಮನಿ ವಂದಿಸಿದರು