ಚಿ.ದೊಡ್ಡಪ್ಪ ಅಪ್ಪ ೨.೫ ಕೋ.ರೂ. ವಿದ್ಯಾರ್ಥಿ ವೇತನಕ್ಕಾಗಿ ಎಸ್ ಬಿಆರ್ ಸಿಇಟಿ  ಫೆ.೪, ೧೧ ರಂದು

IMG-20240107-WA0023
Published on

೧೦ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಉಚಿತವಾಗಿ ಎಸ್ ಬಿ ಆರ್ ದಲ್ಲಿ ಪಿಯುಸಿ ಪ್ರವೇಶ ಪಡೆಯಲು ಭಾರಿ ಅವಕಾಶ

ಸುದ್ದಿಗೋಷ್ಠಿಯಲ್ಲಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಡಾ.ದಾಕ್ಷಾಯಿಣಿ ಅಪ್ದ. ಬಸವರಾಜ ದೇಶಮುಖ ಮಾಹಿತಿ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಾಡಿನ ಪ್ರತಿಷ್ಠಿತ ಪಿಯುಸಿ ವಿಜ್ಞಾನ ಕಾಲೇಜು ಎಂದು ಖ್ಯಾತವಾಗಿರುವ ಇಲ್ಲಿನ ಶರಣಬಸವೇಶ್ವರ ವಸತಿ ಸಹಿತ  ಸಂಯುಕ್ತ ಪಿಯು (ಎಸ್‌ಬಿಆರ್) ಕಾಲೇಜಿನಲ್ಲಿ ಪ್ರವೇಶ ಪಡೆದುಕೊಳ್ಳಲು ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಕೈಗೊಳ್ಳುವ ಎಸ್‌ಬಿಆರ್ ಸಿಇಟಿ-೨೦೨೪ ಫೆ.೪ ಮತ್ತು ೧೧ ರಂದು ನಗರದ ಎಸ್‌ಬಿಆರ್ ಕ್ಯಾಂಪಸ್‌ದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಅಧ್ಯಕ್ಷರು ಆಗಿರುವ ಮಹಾಸೋಹ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ, ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಮತ್ತು ಕಾರ್ಯದರ್ಶಿ ಬಸವರಾಜ ದೇಶಮುಖ ತಿಳಿಸಿದರು.
ನಗರದ  ಮಹಾದಾಸೋಹ ಮನೆಯಲ್ಲಿ ಭಾನುವಾರ ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡಲು ಮಹಾದಾಸೋಹದ ೯ನೇ ಪೀಠಾಧಿಪತಿ ಚಿ.ದೊಡ್ಡಪ್ಪ ಅಪ್ಪ ಅವರ ಹೆಸರಿನಲ್ಲಿ ೨.೫೦ ಕೋಟಿ ರೂ. ವಿದ್ಯಾರ್ಥಿ ವೇತನ ನಿಧಿ ಸ್ಥಾಪಿಸಲಾಗಿದೆ. ಅದರಡಿ ಉಚಿತವಾಗಿ ಪ್ರಥಮ ಪಿಯುಸಿಗೆ ಪ್ರವೇಶ ಪಡೆದುಕೊಳ್ಳಲು ಎಸ್‌ಎಸ್‌ಎಲ್‌ಸಿ ಓದುತ್ತಿರುವ ವಿದ್ಯಾರ್ಥಿಗಳು ಎಸ್‌ಬಿಆರ್ ಸಿಇಟಿ ಬರೆಯಬಹುದಾಗಿದೆ ಎಂದರು.
ಸಿಬಿಎಸ್‌ಇ ಮತ್ತು ಐಸಿಎಸ್‌ಸಿ ಬೋರ್ಡ್ನ ೧೦ನೇ ತರಗತಿ ವಿದ್ಯಾರ್ಥಿಗಳಿಗಾಗಿ ಫೆ. ೪ರಂದು ಹಾಗೂ  ರಾಜ್ಯ ಪಠ್ಯ ಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಫೆ.೧೧ರಂದು  ಮಧ್ಯಾಹ್ನ ೧ ಗಂಟೆಯಿAದ ೩ ಗಂಟೆಯವರೆಗೂ  ಪ್ರವೇಶ ಪರೀಕ್ಷೆ ಜರುಗಲಿದೆ. ಇದಕ್ಕಾಗಿ ಆನ್‌ಲೈನ್‌ದಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಜ.೩೦ ಕೊನೆಯ ದಿನವಾಗಿದೆ ಎಂದು ಮಾತೋಶ್ರೀ ದಾಕ್ಷಾಯಿಣಿ ಅಪ್ಪ ಅವರು ತಿಳಿಸಿದರು.
ಎಸ್‌ಬಿಆರ್ ಸಿಇಟಿ-೨೦೨೪ಯಲ್ಲಿ ಮೊದಲ ಟಾಪ್ ೩೦ ವಿದ್ಯಾರ್ಥಿಗಳಿಗೆ ಪಿಯುಸಿ ಪ್ರಥಮ ವರ್ಷದ ಪ್ರವೇಶ ಹಾಗೂ ಹಾಸ್ಟೇಲ್ ವ್ಯವಸ್ಥೆ ಸಂಪೂರ್ಣ ಉಚಿತವಾಗಿರುತ್ತದೆ. ನಂತರದ ೩೦ ಟಾಪ್ ವಿದ್ಯಾರ್ಥಿಗಳಿಗೆ  ಶೇ.೫೦ ಹಾಗೂ ಆ ಬಳಿಕದ ೩೦ ವಿದ್ಯಾರ್ಥಿಗಳಿಗೆ ಶೇ.೨೫ರಷ್ಟು ಶುಲ್ಕ ವಿನಾಯತಿ ನೀಡಲಾಗುತ್ತದೆ. ಈ ಭಾಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳೂ ಹೈಟೆಕ್ ಶಿಕ್ಷಣ ಕಲಿಯಬೇಕು ಎಂಬ ಉz್ದೆÃಶದಿಂದ ಪೂಜ್ಯ ಡಾ.ಶರಣಬಸವಪ್ಪ ಅವರು ಚಿ.ದೊಡ್ಡಪ್ಪ ಹೆಸರಿನಲ್ಲಿ ೨.೫೦ ಕೋ.ರೂ.ಮೊತ್ತದ ಸ್ಕಾಲರ್‌ಶಿಫ್ ಸ್ಥಾಪಿಸಿ, ಅದರ ಮೂಲಕ ಉಚಿತ ಶಿಕ್ಷಣ ಸಿಗುವಂತೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಅರ್ಹ ವಿದ್ಯಾರ್ಥಿಗಳು ಎಸ್‌ಬಿಆರ್ ಸಿಇಟಿ-೨೦೨೪ ಬರೆಯಲು ಕೂಡಲೇ ತಮ್ಮ ಹೆಸರುಗಳನ್ನು ಆನ್‌ಲೈನ್ ಮೂಲಕ ನೋಂದಾಯಿಸಿಕೊಳ್ಳುವAತೆ ಕೋರಿದರು. ಸುದ್ದಿಗೋಷ್ಠಿಯಲ್ಲಿ ಎಸ್‌ಬಿಆರ್ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ.ಶ್ರೀಶೈಲ ಹೂಗಾಡೆ, ಪ್ರೊ.ಚಂದ್ರಶೇಖರ ಇತರರಿದ್ದರು.

೪೭೦ ವಿದ್ಯಾರ್ಥಿಗಳಿಗೆ ಫ್ರೀ ಮೆಡಿಕಲ್ ಸೀಟು
ಎಬಿಆರ್‌ನಲ್ಲಿ  ನೀಟ್ ಪರೀಕ್ಷೆಗೆ ಹೆಚ್ಚು ಒತ್ತು ನೀಡಿ ತರಬೇತಿ ನೀಡುತ್ತಿರುವುದರಿಂದ ಕಳೆದ ವರ್ಷ ದ್ವಿತೀಯ ಪಿಯುಸಿ ವಿಜ್ಞಾನ ಪಾಸಾಗಿರುವ ವಿದ್ಯಾರ್ಥಿಗಳ ಪೈಕಿ ೪೭೦ ವಿದ್ಯಾರ್ಥಿಗಳು ಮೆಡಿಕಲ್ ಕಾಲೇಜುಗಳಲ್ಲಿ ಉಚಿತ ಸೀಟುಗಳನ್ನು ಪಡೆದುಕೊಂಡು ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಬಸವರಾಜ ದೇಶಮುಖ ತಿಳಿಸಿದರು.ಬ್ರಾÈಂಡ್ ಎಸ್‌ಬಿಆರ್‌ದಲ್ಲಿ  ನೀಟ್ ಪರೀಕ್ಷೆಗೆ  ಆದ್ಯತೆ ನೀಡುತ್ತಿz್ದÉÃವೆ. ಪರಿಣಿತರಿಂದ ನಿರಂತರ ತರಬೇತಿ ಕೊಡಿಸುತ್ತಿರುವುದರಿಂದ ಕಳೆದ ಮೂರು ವರ್ಷಗಳಲ್ಲಿ  ಕ್ರಮವಾಗಿ ೨೦೨೧ರಲ್ಲಿ ೨೮೦, ೨೦೨೨ರಲ್ಲಿ ೪೧೮, ೨೦೨೩ರಲ್ಲಿ ೪೭೦ ವಿದ್ಯಾರ್ಥಿಗಳು ಮೆಡಿಕಲ್ ಫ್ರೀ ಸೀಟು ಪಡೆದುಕೊಂಡಿದ್ದಾರೆ. ಈ ವರ್ಷ ೫೦೦ ಮೀರಲಿದೆ ಎಂಬ ವಿಶ್ವಾಸವನ್ನು ಮಾತೋಶ್ರೀ ದಾಕ್ಷಾಯಿಣಿ ಅಪ್ಪ ಹಾಗೂ ದೇಶಮುಖ ಅವರು ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net