

ಕುಷ್ಟಗಿ: ಪಟ್ಟಣದ ಮಾರುತಿ ವೃತ್ತದಲ್ಲಿನ ಎಸ್‌ಬಿಐ ಸೇವಾ ಕೇಂದ್ರ ಹಾಗೂ ವಾಚ್ ಅಂಗಡಿಯಲ್ಲಿ ಬುಧವಾರ ಬೆಳಗಿನ ಜಾವ ಕಳ್ಳತನ ನಡೆದಿದೆ.
ಎಸ್‌ಬಿಐ ಸೇವಾ ಕೇಂದ್ರದ ಬೀಗ ಮುರಿದು 50ಸಾವಿರ ರೂ. ಕಳವು ಮಾಡಿದ್ದಾರೆಂದು ಕೇಂದ್ರದ ಏಜೆನ್ಸಿ ಮಹಾಂತೇಶ ತಿಳಿಸಿದ್ದಾರೆ. ಪಕ್ಕದ ವಾಚ್ ಸೆಂಟರ್‌ಗೂ ನುಗ್ಗಿ 400 ರೂ. ಕದ್ದಿರುವ ಚೋರರು, ಮಂಜುನಾಥ ಮೆಡಿಕಲ್ ಸ್ಟೋರ್ ಪಕ್ಕದ ಕ್ಲಿನಿಕ್‌ಗೆ ನುಗ್ಗಿದ್ದು, ಅಲ್ಲಿ ಏನೂ ಸಿಗದೆ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.