ಅ.22ರಿಂದ ಬೆಂಗಳೂರಿನಲ್ಲಿ ಲಕ್ಕಿ ಲಕ್ಷ್ಮೀ ಉತ್ಸವ; ಗ್ರಾಹಕರಿ 10 ಕೋಟಿ ಮೌಲ್ಯದ ಬಹುಮಾನ

Gold
Published on

ಬೆಂಗಳೂರು : ಐಜಿಐ ಅರ್ಪಿಸುವ ಆಲ್ ಇಂಡಿಯಾ ಜೆಮ್ ಆ್ಯಂಡ್ ಜ್ಯುವೆಲರಿ ಡೊಮೆಸ್ಟಿಕ್ ಕೌನ್ಸಿಲ್(ಜಿಜೆಸಿ) ಅಯೋಜಿಸಿರುವ ಬಹುನಿರೀಕ್ಷಿತ ಲಕ್ಕಿ ಲಕ್ಷ್ಮೀ ಉತ್ಸವವು ಬೆಂಗಳೂರಿನಲ್ಲಿ ಅ.22ರಿಂದ ಡಿ.9ರವರೆಗೆ ನಡೆಯಲಿದೆ ಎಂದು ಜಿಜೆಸಿ ಅಧ್ಯಕ್ಷ ಸಾಯ್ಯಮ್ ಮೆಹ್ರಾ ಹೇಳಿದ್ದಾರೆ.

ಮಂಗಳವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಗೆಟ್ ಬ್ಲೆಸ್ಡ್, ಬಿ ಲಕ್ಕಿ’ ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಿರುವ ಈ ಉತ್ಸವವು 2006ರಿಂದ ನಡೆಸಿಕೊಂಡು ಬರಲಾಗುತ್ತಿದ್ದು, ಜಗತ್ತಿನಲ್ಲೇ ಅತಿದೊಡ್ಡ ಜ್ಯುವೆಲ್ಲರಿ ಮೇಳವಾಗಲಿದೆ. ಹಿಂದೊಂದು ಕಾಲಕ್ಕೆ ದುಬೈ ಬಂಗಾರಕ್ಕೆ ಪ್ರಸಿದ್ಧವಾದ ಮಾರುಕಟ್ಟೆ ಎನ್ನಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಭಾರತ ಅದಕ್ಕಿಂತ ಹೆಚ್ಚು ಪ್ರಸಿದ್ಧಿಯಾಗಿದ್ದು, ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವ ಲಕ್ಕಿ ಲಕ್ಷ್ಮಿ ಉತ್ಸವದಲ್ಲಿ ದೇಶ ವಿದೇಶಗಳಿಂದ ಬರುವ ಗ್ರಾಹಕರು ಅತ್ಯಾಕರ್ಷಕ ಆಭರಣಗಳನ್ನು ಕೊಂಡು ತಮ್ಮ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ ಎಂದು ವಿವರಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಜಿಜೆಸಿ ಮಾಜಿ ಅಧ್ಯಕ್ಷ ವಿನೋದ್ ಹಯಾಗ್ರೀವ, ಲಕ್ಕಿಲಕ್ಷ್ಮೀ ಫೆಸ್ಟಿವಲ್ ಸಂಚಾಲಕ ಕಮಲ್, ಜಂಟಿ ಸಂಚಾಲಕ ಮನೋಜ್ ಝಾ, ಜಿಜೆಸಿ ನಿರ್ದೇಶಕ ಸುರೇಶ್ ಧೃವ, ಸದಸ್ಯರಾದ ರಮೇಶ್, ಉತ್ಸವದ ರಾಯಭಾರಿ ನಟಿ ಕಾವ್ಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಗ್ರಾಹಕರಿಗೆ 10 ಕೋಟಿ ಮೌಲ್ಯದ ಉಡುಗೊರೆ

ಈ ಹಿಂದಿನ ಲಕ್ಕಿ ಲಕ್ಷ್ಮಿ ಉತ್ಸವದಲ್ಲಿ ದೊರೆತ ಪ್ರತಿಕ್ರಿಯೆಗಳನ್ನು ಅಳವಡಿಸಿಕೊಂಡು ಆಯೋಜಿಸಿರುವ ಈ ವರ್ಷದ ಉತ್ಸವದಲ್ಲಿ ಗ್ರಾಹಕರಿ 10 ಕೋಟಿ ಮೌಲ್ಯದ ಉಡುಗೊರೆಗಳು ದೊರೆಯಲಿವೆ.

ಬೆಂಗಳೂರಿನಲ್ಲಿರುವ ಬಹುತೇಕ ಎಲ್ಲ ಮಳಿಗೆಗಳು ಕೂಡಾ ಉತ್ಸವದಲ್ಲಿ ಭಾಗಿಯಾಗಿದ್ದು, ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. 2 ಗ್ರಾಂ ಬಂಗಾರ ಖರೀದಿಸುವ ಹಾಗೂ 2 ಲಕ್ಷ ರೂ. ಬಂಗಾರ ಖರೀದಿಸುವ ಇಬ್ಬರೂ ಗ್ರಾಹಕರು ಕೂಡಾ ಬಂಪರ್ ಬಹುಮಾನಕ್ಕೆ ಸಮಾನ ಅರ್ಹತೆ ಹೊಂದಿರುತ್ತಾರೆ. ಈ ಉತ್ಸವಕ್ಕಾಗಿಯೇ ವಿಶೇಷ ವಿನ್ಯಾಸದ ಲಕ್ಷ್ಮೀ ಯಂತ್ರ ಒಳಗೊಂಡ ಬೆಳ್ಳಿ ಪಾದುಕ ಉಡುಗೊರೆಯಾಗಿ ದೊರೆಯಲಿದೆ. ಬಂಪರ್ ಬಹುಮಾನ 1 ಕೆ.ಜಿ ಬಂಗಾರ ಸೇರಿದಂತೆ ಅನೇಕ ಬಹುಮಾನಗಳು ಗ್ರಾಹಕರಿಗೆ ಲಭ್ಯವಾಗಲಿವೆ.

"ಬಂಗಾರದ ಮೇಲಿನ ಹೂಡಿಕೆ ಎಂದಿಗೂ ನಷ್ಟವನ್ನು ತರುವುದಿಲ್ಲ. ನಮ್ಮ ಪೋಷಕರು ದುಂದುವೆಚ್ಚ ಮಾಡದೆ ಹಣ ಕೂಡಿಟ್ಟು ಒಡವೆ ಖರೀದಿಸುತ್ತಿದ್ದರು. ಅದರ ಮಹತ್ವ ಈಗ ಮನವರಿಕೆಯಾಗುತ್ತಿದೆ. ಆದ್ದರಿಂದ ಲಕ್ಕಿಲಕ್ಷ್ಮೀ ಗೋಲ್ಡ್ ೆಸ್ಟಿವಲ್‌ನಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ಬಂಗಾರ ಖರೀದಿಸಿ, ಬಹುಮಾನ ಗೆಲ್ಲಿ"

- ಕಾವ್ಯ ಶೆಟ್ಟಿ, ನಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net