ಯಾದಗಿರಿ : 2024-25ನೇ ಸಾಲಿನ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಯೋಜನೆಗಳ ಸೌಲಭ್ಯವನ್ನು ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕಿ ಟಿ.ಪ್ರಿಯದರ್ಶಿನಿ ಅವರು ತಿಳಿಸಿದ್ದಾರೆ.
ಸ್ವಯಂ ಉದ್ಯೋಗ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕ್‌ಗಳ ಸಹಯೋಗದೊಂದಿಗೆ), ವೆಬ್‌ಸೈಟ್ sevasindhu.karnataka.gov.in ನಲ್ಲಿ ಆಗಸ್ಟ್ 31ರ ಒಳಗೆ ಅರ್ಜಿಸಲ್ಲಿಸಬೇಕು. ಯೋಜನೆ ಅರ್ಹತೆ, ಮಾಹಿತಿಗಾಗಿ ವೆಬ್‌ಸೈಟ್ www.kssd.karnataka.gov.in ಭೇಟಿ ನೀಡಬಹುದು. ಸಹಾಯವಾಣಿ 080 22374832, 8050770004, 8050770005 ಅಥವಾ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ ಜಿಲ್ಲಾ ಕಛೇರಿ, ಮಿನಿ ವಿಧಾನಸೌಧ 2ನೇ ಮಹಡಿ ಸಿ-ಬ್ಲಾಕ್ ರೂ.ನಂ. 14 ಚಿತ್ತಾಪೂರ ರಸ್ತೆ, ಯಾದಗಿರಿ ದೂ.ಸಂ.08473 253746ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.