ತುಂಗಭದ್ರಾ ನದಿ ರಕ್ಷಿಸಿ

ಕಂಪ್ಲಿಯಲಿ ನಿರ್ಮಲ ತುಂಗಭದ್ರಾ ಅಭಿಯಾನದ ಮೂರನೇ ಹಂತದ ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಅಭಿಯಾನದ ರಾಯಭಾರಿ ಲಲಿತಾರಾಣಿ ರಂಗದೇವರಾಯಲು ಮಾತನಾಡಿದರು. ಆಂದೋಲನ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಪಾಟೀಲ್ ವೀರಾಪುರ, ದಕ್ಷಿಣ ಭಾರತ ಸಂಚಾಲಕ ಟಿ.ಮಾಧವನ್, ನಿರ್ಮಲ ತುಂಗಭದ್ರಾ ಅಭಿಯಾನದ ರಾಜ್ಯ ಸಂಚಾಲಕ ಮಹಿಮಾ ಪಟೇಲ್ ಇತರರಿದ್ದರು.
ಕಂಪ್ಲಿಯಲಿ ನಿರ್ಮಲ ತುಂಗಭದ್ರಾ ಅಭಿಯಾನದ ಮೂರನೇ ಹಂತದ ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಅಭಿಯಾನದ ರಾಯಭಾರಿ ಲಲಿತಾರಾಣಿ ರಂಗದೇವರಾಯಲು ಮಾತನಾಡಿದರು. ಆಂದೋಲನ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಪಾಟೀಲ್ ವೀರಾಪುರ, ದಕ್ಷಿಣ ಭಾರತ ಸಂಚಾಲಕ ಟಿ.ಮಾಧವನ್, ನಿರ್ಮಲ ತುಂಗಭದ್ರಾ ಅಭಿಯಾನದ ರಾಜ್ಯ ಸಂಚಾಲಕ ಮಹಿಮಾ ಪಟೇಲ್ ಇತರರಿದ್ದರು.
Published on

ಕಂಪ್ಲಿ: ದೇಶದಲ್ಲಿ ಅಪಾಯದಲ್ಲಿರುವ ನದಿಗಳ ಪೈಕಿ ತುಂಗಭದ್ರಾ ಒಂದಾಗಿದ್ದು, ದಕ್ಷಿಣ ಭಾರತದ ಅತಿ ದೊಡ್ಡ ನದಿಯನ್ನು ಅಪಾಯದಿಂದ ರಕ್ಷಿಸಬೇಕಿದೆ ಎಂದು ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಅಧ್ಯಕ್ಷ ಬಸವರಾಜ ಪಾಟೀಲ್ ವೀರಾಪುರ ಹೇಳಿದರು.

ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ ಆಂದೋಲನದಡಿ ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಿರ್ಮಲ ತುಂಗಭದ್ರಾ ಅಭಿಯಾನದ ಮೂರನೇ ಹಂತದ ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸಹ್ಯಾದ್ರಿ ಪರ್ವತದಲ್ಲಿ ಮರಗಳನ್ನು ಕಡಿದಿದ್ದು, ನದಿಯ ಅಪಾಯಕ್ಕೆ ಕಾರಣವಾಗಿದೆ. ನದಿಗೆ ಕೈಗಾರಿಕೆ, ಕೃಷಿ ತ್ಯಾಜ್ಯ ಸೇರುತ್ತಿರುವುದರಿಂದ ನೀರು ಕುಡಿಯಲು ಯೋಗ್ಯವಾಗಿಲ್ಲ. ಜನ ಮತ್ತು ಜಲ ಜಾಗೃತಿಗೊಳಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ. ನದಿಯ ಪಾವಿತ್ರ್ಯ ಕಾಪಾಡಲು ಸ್ಥಳೀಯ ಆಡಳಿತ, ಕೃಷಿಕರು, ಧರ್ಮಗುರುಗಳು, ಜನ ಸಾಮಾನ್ಯರಲ್ಲಿ ಜಾಗೃತಿಗೊಳಿಸಲು ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

ನಿರ್ಮಲ ಅಭಿಯಾನದ ಜಿಲ್ಲಾ ಸಂಚಾಲಕ ಡಾ.ಶಿವಕುಮಾರ ಮಾಲಿಪಾಟೀಲ್ ಮಾತನಾಡಿ, ತುಂಗಭದ್ರಾ ನೀರು ಕಲುಷಿತಗೊಂಡಿದ್ದು, ನೀರು ಕುಡಿದರೆ ಕ್ಯಾನ್ಸರ್, ಜಾಂಡೀಸ್ ಸೇರಿ ವಿವಿಧ ರೋಗಗಳಿಗೆ ಕಾರಣವಾಗಿದೆ. ಮುಂದಿನ ಪೀಳಿಗೆಗೆ ನದಿಯ ಪಾವಿತ್ರ್ಯ ಉಳಿಸಲು ಸರ್ವರೂ ಕೈಜೋಡಿಸಬೇಕಿದೆ ಎಂದರು.

ಆಂದೋಲನದ ದಕ್ಷಿಣ ಭಾರತ ಸಂಚಾಲಕ ಟಿ.ಮಾಧವನ್, ನಿರ್ಮಲ ತುಂಗಭದ್ರಾ ಅಭಿಯಾನದ ರಾಜ್ಯ ಸಂಚಾಲಕ ಮಹಿಮಾ ಪಟೇಲ್, ರಾಯಭಾರಿ ಲಲಿತಾರಾಣಿ, ಕೊಪ್ಪಳ ಜಿಲ್ಲಾಧ್ಯಕ್ಷ ರಾಘವೇಂದ್ರ ಸೂನಾ, ಕಂಪ್ಲಿ ತಾಲೂಕು ಮಾರ್ಗದರ್ಶಕ ಡಾ.ಜಂಬುನಾಥ ಗೌಡ, ಪ್ರಮುಖರಾದ ಎಸ್.ಎಂ.ನಾಗರಾಜಸ್ವಾಮಿ, ಎ.ಸಿ.ದಾನಪ್ಪ, ಬಳ್ಳಾರಿ ರವೀಂದ್ರನಾಥಶ್ರೇಷ್ಠಿ, ಡಾ.ಶ್ರೀನಿವಾಸರೆಡ್ಡಿ, ಡಾ.ಭಟ್ಟಾ ರಾಮಾಂಜಿನೇಯ, ಕೆ.ಎಂ.ವಾಗೀಶ, ರಮೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net