ತಿಂಗಳಿಗೆ ಇಂತಿಷ್ಟು ಹಣ ಉಳಿತಾಯ ಮಾಡಿ

11sunti02
ಹೆರೂರು ಗ್ರಾಮದಲ್ಲಿ ಲೀಡ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಿದ್ದ ಹಣಕಾಸಿನ ಆರ್ಥಿಕ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರು.
Published on

ಸುಂಟಿಕೊಪ್ಪ: ಗೃಹಿಣಿಯರು ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆದು ತಿಂಗಳಿಗೆ ಇಂತಿಷ್ಟು ಉಳಿತಾಯ ಮಾಡಿದರೆ ಆ ಹಣವು ತುರ್ತು ಸಂದರ್ಭದಲ್ಲಿ ಉಪಯೋಗಕ್ಕೆ ಬರಲಿದೆ. ಅಲ್ಲದೆ ಆರೋಗ್ಯ ಸಮಸ್ಯೆ ಎದುರಾದಾಗ ವಿಮೆ ಸೌಲಭ್ಯದಿಂದ ಚಿಕಿತ್ಸೆ ಪಡೆಯಬಹುದು ಎಂದು ಆರ್ಥಿಕ ಸಾಕ್ಷರತಾ ಕೇಂದ್ರದ (ಎಫ್‌ಎಲ್‌ಸಿ) ಅಧಿಕಾರಿ ನಬಿ ಹೇಳಿದರು.

ಲೀಡ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಅವಾರ್ಡ್ ಸಂಸ್ಥೆ ವತಿಯಿಂದ ಹೆರೂರು ಗ್ರಾಮದ ಸಮುದಾಯ ಭವನದಲ್ಲಿ ಹಣಕಾಸಿನ ಆರ್ಥಿಕ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಬ್ಯಾಂಕ್‌ಗಳಲ್ಲಿ ಪ್ರತಿಯೊಬ್ಬರೂ ವ್ಯವಹಾರ ಮಾಡುವುದರಿಂದ ಸರ್ಕಾರದ ಎಲ್ಲ ಯೋಜನೆ, ಸಾಲ ಸೌಲಭ್ಯಗಳನ್ನು ಬ್ಯಾಂಕ್‌ಗಳ ಮೂಲಕ ಪಡೆಯಬಹುದು. ಭವಿಷ್ಯದ ಭದ್ರತೆಗೆ ಮಾಸಿಕ ಆದಾಯದಲ್ಲಿ ಒಂದಷ್ಟು ಹಣವನ್ನು ಉಳಿಸಿ ಆರ್‌ಡಿ, ಇನ್ನಿತರ ಯೋಜನೆಗಳಲ್ಲಿ ಹಣ ಕಟ್ಟುವುದರಿಂದ ನಿಮ್ಮ ಮಕ್ಕಳ ಶಿಕ್ಷಣ, ಮದುವೆ ಇನ್ನಿತರ ಸಂದರ್ಭದಲ್ಲಿ ಉಪಯೋಗಕ್ಕೆ ಬರುತ್ತದೆ ಎಂದು ತಿಳಿಸಿದರು. ಆರ್ಥಿಕ ಸಮಾಲೋಚಕ ಸಿ.ಜಿ.ಹರೀಶ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net