ಸರ್ಕಾರಿ ನೌಕರರ ಸಂಘದಕ್ಕೆ ಸತೀಶ್ ಅಧ್ಯಕ್ಷ

sathish new president
Published on

ರಾಮನಗರ: ಜಿಲ್ಲಾ ಸರ್ಕಾರಿ ನೌಕರರ ಸಂಘ 2024-2029ರ ಅವಧಿಗೆ ಅಧ್ಯಕ್ಷರಾಗಿ ಕೆ. ಸತೀಶ್ ಅವಿರೋಧ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕನಕಪುರದ ನಂದೀಶ್ ಮತ್ತು ಹಾಲಿ ಅಧ್ಯಕ್ಷರೂ ಆಗಿದ್ದ ಕೆ.ಸತೀಶ್ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ನಂದೀಶ್ ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದುಕೊಂಡ ಹಿನ್ನೆಲೆಯಲ್ಲಿ ಸತೀಶ್ ಎರಡನೇ ಬಾರಿಗೆ ಅಧ್ಯಕ್ಷರಾದರು.

ಈ ವೇಳೆ ಮಾತನಾಡಿದ ಸತೀಶ್, ಕಳೆದ ಅವಧಿಯಲ್ಲಿ ನಾವು ಮಾಡಿರುವ ಕೆಲಸವನ್ನು ನೌಕರರು ಗುರ್ತಿಸಿದ ಕಾರಣ ನಮ್ಮ ಗೆಲುವು ಅವಿರೋಧವಾಗಿ ಆಯ್ಕೆಯಾಗಲು ಸಹಕಾರಿಯಾಗಿದೆ. ನಮ್ಮೆಲ್ಲಾ ನಿರ್ದೇಶಕರು, ನೌಕರ ವರ್ಗ ಒಟ್ಟಾಗಿ ಮುಂದಿನ 5 ವರ್ಷಗಳ ಕಾಲ ಮುಂದಿನ ಯೋಜನೆಗಳನ್ನು ಯಶಸ್ವಿಗೊಳಿಸಲು ಶ್ರಮಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘವನ್ನು ಮತ್ತಷ್ಟು ಸದೃಡಗೊಳಿಸುವ ನಿಟ್ಟಿನಲ್ಲಿ ಪ್ರಮಾಣಿಕವಾಗಿ ಶ್ರ"ುಸುವ ಕೆಲಸ ಮಾಡುತ್ತೇವೆ ಎಂದರು.

ಈ ಸಂಧರ್ಭದಲ್ಲಿ ಸರ್ಕಾರಿ ನೌಕರ ಸಂಘದ ಮುಖಂಡರುಗಳಾದ ಬೈರಪ್ಪ, ಸತೀಶ್, ಪ್ರದೀಪ್, ಸುರೇಂದ್ರ, ಹನುಮಯ್ಯ, ಶಂಕರಾನಂದ್, ಜಯರಾಮು, ಸಿದ್ದಲಿಂಗಸ್ವಾಮಿ, ಶಿವಕುಮಾರ್, ರಾಜೇಗೌಡ, ಶಿವಸ್ವಾಮಿ, ಯತೀಶ್, ದರ್ಶನ್, ಗಿರೀಶ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net