

ಚಾಮರಾಜನಗರ: ಪರರ ಹಿತದೃಷ್ಟಿಯಿಂದ ಮಾಡುವ ಸಾಧನೆ ಮನಸ್ಸಿಗೆ ತೃಪ್ತಿಯನ್ನು ತಂದುಕೊಡುತ್ತದೆ ಎಂದು ದೀನಬಂಧು ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಜಿ.ಎಸ್.ಜಯದೇವ್ ತಿಳಿಸಿದರು.
ನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಆವರಣದಲ್ಲಿ ಜೆಎಸ್‌ಎಸ್ ಮಹಿಳಾ ಕಾಲೇಜು ಹಾಗೂ ಹಿರಿಯ ವಿದ್ಯಾರ್ಥಿನಿಯರ ಸಂಘದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಕನಸಿನ ಅಲೆ ಮಾತನಾಡಿದಾಗ-ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಮಾಡಿದರು.
ಸುಮಾರು 5000 ಕಿಮೀ ಸಾಗರದಲ್ಲಿ ಏಕಾಂಗಿಯಾಗಿ ಪ್ರಯಾಣ ಮಾಡುತ್ತಾರೆ ಅಂದರೇ, ಅದರ ಅನುಭವ ಅದರಲ್ಲಿ ಭಾಗಿಯಾದಾಗಲೇ ಮಾತ್ರ ಗೊತ್ತಾಗುತ್ತದೆ. ಕೇವಲ ದೈಹಿಕ ಸಾಮರ್ಥ್ಯ ಮತ್ತು ಬುದ್ಧಿಶಕ್ತಿಯಿಂದ ಮಾತ್ರ ಈ ಸಾಧನೆ ಮಾಡಲು ಸಾಧ್ಯವಿಲ್ಲ. ಮನಸ್ಸಿನ ನಿರ್ಧಾರಕ್ಕೆ ತಕ್ಕಂತೆ ನಡೆಯುವ ಶಕ್ತಿ ಇರಬೇಕು ಎಂದರು.
ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ, ಜೆ.ಎಸ್.ಎಸ್ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ, ಹಿರಿಯ ವಿದ್ಯಾರ್ಥಿನಿಯರ ಸಂಘದ ಅಧ್ಯಕ್ಷೆ ಕೆ.ಎಸ್.ಸುಮಾ, ಕಾರ್ಯಕಾರಿ ಸಮಿತಿ ಸಂಚಾಲಕಿ ಕೆ.ಎಸ್.ಅರುಣಶ್ರೀ, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರಾದ ಸೌಮ್ಯ, ಜಮುನಾ ಇತರರು ಹಾಜರಿದ್ದರು.