

ಬೆಂಗಳೂರು: ಬಸವನಗುಡಿಯ ಸಾಕಮ್ಮ ಗಾರ್ಡನ್ಸ್ನಲ್ಲಿರುವ ವೇದಾಂತ ನಿಲಯದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ವೇದಾಂತ ವಿದ್ವಾಂಸ ಡಾ.ಕೆ.ಜಿ.ಸುಬ್ರಾಯ ಶರ್ಮ ಅವರ 'ಸತ್ಯದ ಮಹಿಮೆ' ಗ್ರಂಥ ಬಿಡುಗಡೆಗೊಂಡಿತು.
ಎಸ್.ಆರ್.ಪಾಂಡುರಂಗ ಕೃತಿ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಜಿ.ರಾಮಕೃಷ್ಣ, ಪವನ್ ಕುಮಾರ್ ದೇಶ್ ಕುಲಕರ್ಣಿ, ಕೆ.ವಿ.ಶ್ರೀನಿವಾಸ ಮೂರ್ತಿ, ಪವನ್ ಕುಮಾರ್ ದೇಶ್ ಕುಲಕರ್ಣಿ, ಎಂ.ಎನ್.ಶ್ರೀರಾಮ್, ಡಾ.ಕೆ.ಜಿ.ಸುಬ್ರಾಯ ಶರ್ಮ ದಂಪತಿ ಇದ್ದರು.
'ಸತ್ಯದ ಮಹಿಮೆ' ಡಾ.ಕೆ.ಜಿ.ಸುಬ್ರಾಯ ಶರ್ಮ ರಚನೆಯ 173ನೇ ಕೃತಿಯಾಗಿದೆ. ಸತ್ಯಂ ಜ್ಞಾನಮನಂತಂ ಬ್ರಹ್ಮ, ಶ್ರೀರಾಮನ ಸತ್ಯಸಂಧತೆ, ಸತ್ಯಮೂಲಾನಿ ಸರ್ವಾಣಿ, ಅಮರಕೋಶದಲ್ಲಿ ಸತ್ಯ, ಸುಭಾಷಿತಗಳಲ್ಲಿ ಸತ್ಯ, ಸತ್ಯದಿಂದ ಆತ್ಮದರ್ಶನ ಮುಂತಾದ ವಿಷಯಗಳನ್ನು ಉಲ್ಲೇಖಿಸಿ ಗ್ರಂಥ ರಚಿಸಿದ್ದಾರೆ.