

ಸಾಸ್ವೆಹಳ್ಳಿ: ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ಜನರ ಮೇಲೆ ದಾಳಿ ಮಾಡುತ್ತಿದ್ದ ಮುಷ್ಯನನ್ನು ಗ್ರಾಮಸ್ಥರ ಸಹಕಾರದೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಬೆಳಗ್ಗೆ ಸೆರೆ ಹಿಡಿದರು.
ಹದಿನೈದು ದಿನಗಳಿಂದ ಗ್ರಾಮದ ಅನೇಕರ ಮೇಲೆ ದಾಳಿ ಮಾಡಿದೆ. ಮುಷ್ಯ ಸೆರೆಗೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಚೋಳಚಗುಡ್ಡದ ವೀರಯ್ಯ ಮೃತ್ಯುಂಜಯ ಸರಗಣಾಚಾರಿ ತಂಡ ಕರೆಸಲಾಗಿತ್ತು.
ಈ ತಂಡ ಗುರುವಾರ ಸಂಜೆ ಗ್ರಾಮದ ಹೊರವಲಯದ ಉಪ್ಪಾರ ಹಳ್ಳದ ಬಳಿ ಇರಿಸಿದ್ದ ಬಲೆಗೆ ಶುಕ್ರವಾರ ಬೆಳಗ್ಗೆ ಮುಷ್ಯ ಸೆರೆ ಹಿಡಿದು, ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಗ್ರಾಪಂ ಅಧ್ಯಕ್ಷ ಅಪ್ಪಲರಾಜು, ಸದಸ್ಯ ವೀರೇಶ್, ಪಿಡಿಒ ಎಚ್.ಎಸ್. ಶಿವಕುಮಾರ್, ಕಾರ್ಯದರ್ಶಿ ಪಾಲಾಕ್ಷಪ್ಪ, ಸಿಬ್ಬಂದಿ ವೆಂಕಟೇಶ್, ರುದ್ರೇಶ್, ಅರಣ್ಯ ಇಲಾಖೆಯ ಡಿಆರ್‌ಎಫ್‌ಒ ಮೈಲಾರಪ್ಪ, ಸಿಬ್ಬಂದಿ ಭೀಮಪ್ಪ ಪಾಕನಟ್ಟಿ, ಸಿದ್ದೇಶ್, ಚಮನ್‌ಸಾಬ್, ರೈತರಾದ ಸಾಟಿ ವೆಂಕಟೇಶ್‌ರಾವ್, ಮಂಜುನಾಥ್, ಕಾಂತರಾಜ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.