ಸಾಸ್ತಾನ ಶ್ರೀನಿವಾಸ ಕಲ್ಯಾಣೋತ್ಸವ

kalyana
Published on

ಕೋಟ: ಸಾಸ್ತಾನದ ಕಾರ್ತಿಕೇಯ ಎಸ್ಟೇಟ್‌ನಲ್ಲಿ ಲೋಕ ಕಲ್ಯಾಣಾರ್ಥ ಏ.1ರಿಂದ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 3ರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ.

ಏ.2ರಂದು ಪ್ರಾರ್ಥನೆ, ನವಗ್ರಹ ಹೋಮ, ಮಧ್ಯಾಹ್ನ 3ರಿಂದ ಶ್ರೀ ಪ್ರವೀಣ್ ಪಡುಕೆರೆ ನೇತೃತ್ವದಲ್ಲಿ ವಿಶೇಷ ಕುಣಿತ ಭಜನೆ, ಸಂಜೆ 5.30ರಿಂದ ಪುತ್ತೂರು ಜಗದೀಶ್ ಆಚಾರ್ ಮತ್ತು ತಂಡದಿಂದ ಭಕ್ತಿ ರಸಮಂಜರಿ, ರಾತ್ರಿ 7ರಿಂದ ಡಾ.ವಿಜಯ ಮಂಜರ್ ಪಾಂಡೇಶ್ವರ ಅವರಿಂದ ಧಾರ್ಮಿಕ ಸಂದೇಶ ಕಾರ‌್ಯಕ್ರಮ ನಡೆಯಲಿದೆ.

3ರಂದು ಸಾಲಿಗ್ರಾಮ ಶ್ರೀ ಗುರುದೇವ ನರಸಿಂಹ ದೇವಸ್ಥಾನದಿಂದ ಪದ್ಮಾವತಿ ಸಹಿತ ಶ್ರೀನಿವಾಸ ದೇವರ ದಿವ್ಯ ಶೋಭಾಯಾತ್ರೆ ನಡೆಯಲಿದೆ. ಸಂಜೆ 5ರಿಂದ ದೇವರ ವಿವಾಹ ಮಂಟಪ ಪ್ರವೇಶ, ಸೀಮಂತ ಪೂಜೆ, ವಿವಾಹ ಮಂಟಪಕ್ಕೆ ಪದ್ಮಾವತಿ ದೇವಿ ಆಗಮನ, ಸ್ವರ್ಣಮಣಿ ಬಂಧನ, ಮುಹೂರ್ತ ನಿರೀಕ್ಷಣೆ, ಮಾಲಾಧಾರಣೆ, ಸಂಜೆ 6.30ಕ್ಕೆ ಶ್ರೀನಿವಾಸ ಕಲ್ಯಾಣೋತ್ಸವ ಕಂಕಣ, ಮಂಗಳಸೂತ್ರ ಸಮರ್ಪಣೆ, ವಿವಾಹ ಹೋಮ ನೆರವೇರಲಿದೆ. ಬಳಿಕ ಮಂಗಳಾಚರಣೆ, ಮಹಾಪ್ರಸನ್ನ ಪೂಜೆ, ಅಷ್ಟಾವಧಾನ ಸೇವೆ ನಡೆಯಲಿದೆ. 30 ಸಾವಿರಕ್ಕೂ ಅಧಿಕ ಮಂದಿ ಕಲ್ಯಾಣೋತ್ಸವದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net