ಸಸಿಹಿತ್ಲು ಭಗವತಿ ದೇವಸ್ಥಾನದಲ್ಲಿ ಗೊನೆ ಮುಹೂರ್ತ

gone muhurtha
Published on

ಹಳೆಯಂಗಡಿ: ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ ಅ.27ರಂದು ನಡೆಯುವ ಹೊಸಕ್ಕಿ ನಡಾವಳಿ(ತುಲಾಪತ್ತ್) ಪ್ರಯುಕ್ತ ಕದಿಕೆ ಭಂಡಾರ ಮಂದಿರದಲ್ಲಿ ಗೊನೆ ಮುಹೂರ್ತ ಸವಾರಂಭ ನಡೆಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಅವರು ವಿಶೇಷ ಪ್ರಾರ್ಥನೆ ನಡೆಸಿ ಗೊನೆ ಮುಹೂರ್ತ ನೆರವೇರಿಸಿದರು.

ದೇವಸ್ಥಾನದ ಅರ್ಚಕ ವೃಂದ, ಏಳೂರ ಗುರಿಕಾರರು, ಆಚಾರಪಟ್ಟವರು, ದೇವಸ್ಥಾನದ ಅಧ್ಯಕ್ಷ ವಾಮನ ಇಡ್ಯ, ಕದಿಕೆ ತೀಯಾ ಸಂಘದ ಅಧ್ಯಕ್ಷ ಸುರೇಶ ಬಂಗೇರ, ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net