ಗುರಿ ಸಾಧನೆಗೆ ಪ್ರಾಮಾಣಿಕ ಪ್ರಯತ್ನ ಅಗತ್ಯ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್

0308KLB05
ಕಲಬುರಗಿಯ ರಂಗ ಮಂದಿರದಲ್ಲಿ ಸರ್ವಜ್ಞ ಕಾಲೇಜಿನಿಂದ ಶನಿವಾರ ಆಯೋಜಿಸಿದ್ದ ವ್ಯಸನ ಮುಕ್ತ ದಿನಾಚರಣೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಉದ್ಘಾಟಿಸಿದರು. ಪೂಜ್ಯ ಮಹಾಂತ ಸ್ವಾಮಿಗಳು, ನ್ಯಾ.ಎಸ್.ಎಂ.ರಡ್ಡಿ ಡಾ.ಅರವಿಂದ ಜತ್ತಿ, ಶಿವಶರಣಪ್ಪ ಮೂಳೆಗಾಂವ, ಪ್ರೊ.ಚನ್ನಾರಡ್ಡಿ ಪಾಟೀಲ್, ಅಭಿಷೇಕ್ ಪಾಟೀಲ್, ಸಂಗೀತಾ ಅಭಿಷೇಕ್ ಪಾಟೀಲ್, ಕರುಣೇಶ ಹಿರೇಮಠ, ಪ್ರಶಾಂತ ಕುಲಕರ್ಣಿ ಇತರರಿದ್ದರು.
Published on

ಉನ್ನತ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವಾಗಲೇ ಪ್ರತಿದಿನ ನಾಲ್ಕು ಗಂಟೆಗಳ ಕಾಲ ಓದಿ ಐಎಎಸ್ ಪಾಸ

ಸರ್ವಜ್ಞ ಕಾಲೇಜಿನಲ್ಲಿ ವ್ಯವನ ಮುಕ್ತ ದಿನಾಚರಣೆ : ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ



ವಿಜಯವಾಣಿ ಸುದ್ದಿಜಾಲ ಕಲಬುರಗಿ
ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಗುರಿ ಸಾಧಿಸುವ ಛಲ ಇರಬೇಕು. ಗೋಲು ತಲುಪಲು ಮೌಲಿಕ ವಿಚಾರ, ಪ್ರಾಮಾಣಿಕ ಪ್ರಯತ್ನ ಅವಶ್ಯವಾಗಿದೆ ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಹೇಳಿದರು.
ಜಸ್ಟಿಸ್ ಶಿವರಾಜ ಪಾಟೀಲ ಪ್ರತಿಷ್ಠಾನ, ಸರ್ವಜ್ಞ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ನಗರದ ಎಸ್.ಎಂ.ಪAಡಿತ ರಂಗಮoದಿರದಲ್ಲಿ ಶನಿವಾರ ಆಯೋಜಿಸಿದ್ದ ವ್ಯಸನ ಮುಕ್ತ ದಿನಾಚರಣೆ ಹಾಗೂ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಾಧಿಸಲು ಶಿಕ್ಷಕರ ಮಾರ್ಗದರ್ಶನ, ಉತ್ತಮರ ಬಾಂಧವ್ಯ ಪ್ರೇರಣೆ ನೀಡುತ್ತದೆ ಎಂದರು.
ಮಕ್ಕಳ ಮನಸ್ಸು ಪರಿಶುದ್ಧವಾಗಿರುತ್ತದೆ. ಹಾಗೆ ವಿದ್ಯಾರ್ಥಿಗಳು ತಮ್ಮ ಚಿಂತನೆ ಮತ್ತು ಮನಸ್ಸು ಸ್ವಚ್ಛವಾಗಿರಿಸಿಕೊಳ್ಳಲು ಸೂಕ್ತ ವಾತಾವರಣ ನಿರ್ಮಿಸಿಕೊಳ್ಳಬೇಕು. ಕಲುಷಿತ ವಿಚಾರಗಳಿರಬಾರದು. ದುಶ್ಚಟ ಪ್ರಭಾವಕ್ಕೊಳಗಾಗಬಾರದು. ಸಮಯದ ಪ್ರಜ್ಞೆ ಬೆಳೆಸಿಕೊಂಡು ಅಧ್ಯಯನ ಮಾಡಿದರೆ ಸಾಧನೆ ಮೆರೆಯಲು ಸಾಧ್ಯ ಎಂದು ತಿಳಿಸಿದರು.
ನಾನು ಉನ್ನತ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವಾಗಲೇ ಪ್ರತಿದಿನ ನಾಲ್ಕು ಗಂಟೆಗಳ ಕಾಲ ಓದಿ ಐಎಎಸ್ ಪಾಸಾಗಿz್ದೆÃನೆ. ಸರ್ಕಾರಿ ನೌಕರರಿಲ್ಲದ ಸಾಧಾರಣ ಕುಟುಂಬದಿAದ ಬಂದಿz್ದÉÃನೆ.ಸಾಧನೆಗೆ ಯಾವುದು ಅಡ್ಡಿಯಾಗುವುದಿಲ್ಲ ಎಂದು ಯಶೋಗಾಥೆ ಹೇಳಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಜೀವನದಲ್ಲಿ ಯಶಸ್ಸು ಪಡೆಯಲು ಸಮಯ ಪಾಲಿಸಬೇಕು.ಮನಸ್ಸು ನಮ್ಮ ಹತೋಟಿಯಲ್ಲಿರಬೇಕು. ಯೋಗ, ಧ್ಯಾನ, ಓದು, ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಎಲ್ಲದಕ್ಕೂ ಸಮಯ ನಿಗದಿಪಡಿಸಿಕೊಳ್ಳಬೇಕು ಎಂದು ಫೌಜಿಯಾ ತರನ್ನುಮ್ ಕಿವಿಮಾತು ಹೇಳಿದರು.
ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಶಿಕ್ಷಣ ಸಿಗಬೇಕು. ಕಲಿತು ಸಮಾಜ ಸುಧಾರಣೆಗೆ ಬದ್ಧತೆಯಿಂದ ಶ್ರಮಿಸಬೇಕು. ಬಡತನ ಸಮಸ್ಯೆ ಮೆಟ್ಟಿ ನಿಂತು ಮುನ್ನೆಡೆದರೆ ಯಶಸ್ವಿಯಾಗುತ್ತೇವೆ ಎಂಬುದು ಮರೆಯಬಾರದು. ಗುರಿ ತಲುಪಿಸದ ನಂತರ ಸೇವೆಯೇ ಮುಖ್ಯ ಗುರಿಯಾಗಿರಬೇಕು ಎಂದರು.
ಮುದಗಲ್-ತಿಮ್ಮಾಪುರ ಕಲ್ಯಾಣ ಆಶ್ರಮದ ಪ್ರವಚನಯೋಗಿ ಪೂಜ್ಯ ಮಹಾಂತ ಸ್ವಾಮಿಗಳು ಸನ್ನಿಧಾನ ವಹಿಸಿದ್ದರು.
ವಿಶ್ರಾಂತ ನ್ಯಾಯಾಧೀಶರಾದ ಎಸ್.ಎಂ.ರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾದ ಬಸವ ಸಮಿತಿ ಅಧ್ಯಕ್ಷ ಡಾ.ಅರವಿಂದ ಜತ್ತಿ, ಪಿಯು ಶಿಕ್ಷಣ ಉಪ ನಿರ್ದೇಶಕ ಶಿವಶರಣಪ್ಪ ಮೂಳೆಗಾಂವ,ಸAಸ್ಥೆ ಸಂಸ್ಥಾಪಕ ಪ್ರೊ.ಚನ್ನಾರಡ್ಡಿ ಪಾಟೀಲ್, ಮುಖ್ಯ ಶೈಕ್ಷಣಿಕ ನಿರ್ದೇಶಕ ಅಭಿಷೇಕ್ ಚನ್ನಾರಡ್ಡಿ ಪಾಟೀಲ್, ಸರ್ವಜ್ಞ ಚಿಣ್ಣರ ಲೋಕದ ನಿರ್ದೇಶಕಿ ಸಂಗೀತಾ ಅಭಿಷೇಕ್ ಪಾಟೀಲ್, ಪ್ರಮುಖರಾದ ಪ್ರಶಾಂತ ಕುಲಕರ್ಣಿ,ವಿನುತಾ ಆರ್.ಬಿ.,ಪ್ರಭುಗೌಡ ಸಿದ್ದಾರಡ್ಡಿ,ವಿಜಯ ನಾಲವಾರ,ಕರುಣೇಶ್ ಹಿರೇಮಠ ಮೊದಲಾದವರಿದ್ದರು.
ಗುರುರಾಜ ಕುಲಕರ್ಣಿ ಸ್ವಾಗತಿಸಿದರು. ಡಾ.ವಿದ್ಯಾವತಿ ಪಾಟೀಲ್ ನಿರೂಪಿಸಿದರು. ತ್ರಿವೇಣಿ ಭಾವಿ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಜೀವನ ದೇವರು ಕೊಟ್ಟ ಸುಂದರ ಕೊಡುಗೆ
ಸಾನಿಧ್ಯ ವಹಿಸಿದ್ದ ಮುದಗಲ್-ತಿಮ್ಮಾಪುರ ಕಲ್ಯಾಣ ಆಶ್ರಮದ ಪ್ರವಚನ ಯೋಗಿ ಪೂಜ್ಯ ಮಹಾಂತ ಸ್ವಾಮಿಗಳು ವಿಶೇಷ ಉಪನ್ಯಾನ ನೀಡಿ,ಮಹಾಂತ ಜೋಳಿಗೆಯ ಹರಿಕಾರರಾದ ಲಿಂಗೈಕ್ಯ ಪರಮಪೂಜ್ಯ ಡಾ.ಮಹಾಂತ ಅಪ್ಪಗಳು ಇಳಕಲ್ ಅವರು ಲಕ್ಷಾಂತರ ಜನರ ದುಶ್ಚಟ ಬಿಡಿಸಿ ಸನ್ಮಾರ್ಗದತ್ತ ಕರೆ ತಂದರು ಎಂದು ಸ್ಮರಿಸಿದರು.ಜೀವನ ದೇವರು ಕೊಟ್ಟ ಸುಂದರ ಕೊಡುಗೆ,ಅದನ್ನು ಸುಂದರವಾಗಿಟ್ಟುಕೊಳ್ಳಬೇಕು.ದುಶ್ಚಟ್ಟಕ್ಕೆ ದಾಸರಾಗಿ ಹಾಳು ಮಾಡಿಕೊಳ್ಳಬಾರದು. ಜ್ಞಾನ, ಅರಿವು,ತಿಳಿವಳಿಕೆ ಇರುತ್ತದೆ. ಅರಿವಿನ ಜನ್ಮದೊಳಗಿದ್ದು ಬದುಕು ಹಾಳು ಮಾಡಿಕೊಳ್ಳಬಾರದು. ದುಶ್ಚಟ ಸಂಬAಧ, ಕುಟುಂಬ,ಮಾನವ ಜನಾಂಗವನ್ನೇ ಹಾಳು ಮಾಡುತ್ತವೆ. ಹೀಗಾಗಿ ಎಚ್ಚರದಿಂದ ಇದ್ದು ಉತ್ತಮರಾಗಿ ಆದರ್ಶ ಸಮಾಜ ನಿರ್ಮಿಸಲು ಎಲ್ಲರು ಕೈಜೋಡಿಸಬೇಕು ಎಂದರು. ಶಿಕ್ಷಕರು ಮತ್ತು ಪಾಲಕರು ಮಕ್ಕಳಿಗೆ ಆದರ್ಶ ಮಾನವೀಯ ಮೌಲ್ಯಗಳನ್ನು ತಿಳಿಸಬೇಕು.ವಿದ್ಯೆಯಷ್ಟೇ ಮುಖ್ಯವಾದ ಆಚಾರ, ಸಂಸ್ಕಾರ, ಸಂಸ್ಕೃತಿ ಕಲಿಸಿ ವ್ಯಸನಮುಕ್ತ ಸಮಾಜ ನಿರ್ಮಿಸುವ ಪ್ರತಿಜ್ಞಾವಿಧಿ ಬೋಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net