

ಗೊರೇಬಾಳ: ಸರ್ದಾರ ವಲ್ಲಭಭಾಯಿ ಪಟೇಲ್‌ರಂತಹ ಮಹನೀಯರ ಗಟ್ಟಿ ನಿರ್ಧಾರದಿಂದ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ಕಲ್ಯಾಣ ಕರ್ನಾಟಕ ಸ್ವತಂತ್ರೃವಾಯಿತು ಎಂದು ಮುಖ್ಯ ಶಿಕ್ಷಕಿ ಪತ್ತಿಪಾಟಿ ಸುಬ್ಬಲಕ್ಷ್ಮೀ ಹೇಳಿದರು.
ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಸ್ವತಂತ್ರೃಕ್ಕಾಗಿ ಹೋರಾಡಿದ ಸರ್ದಾರ ವಲ್ಲಭಭಾಯಿ ಪಟೇಲ್, ಡಾ. ಅಂಬೆಡ್ಕರ್‌ರಂತಹ ಮಹನಿಯರನ್ನು ಗೌರವಿಸಬೇಕು. ಪ್ರತಿಯಬ್ಬರೂ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: ಸರ್ದಾರ್ ವಲ್ಲಭಭಾಯಿ ಪಟೇಲ್ ದಿಟ್ಟ ನಿಲುವು
ಎಸ್ಡಿಎಂಸಿ ಅದ್ಯಕ್ಷ ವಿರುಪಣ್ಣ, ಸದಸ್ಯ ತಿಮ್ಮಣ್ಣ, ಶಿಕ್ಷಕಿಯರಾದ ಪದ್ಮಾವತಿ, ನೇತ್ರಾವತಿ, ಶಿವಾರಡ್ಡಿ, ದೈಹಿಕ ಶಿಕ್ಷಕ ವೀರಣ,್ಣ ವಿದ್ಯಾರ್ಥಿಗಳಾದ ನಂದಿತ, ರುಚಿತ, ಉಮಾದೇವಿ, ನೇತ್ರಾವತಿ ಇದ್ದರು.