ಸರ್ದಾರ್ ವಲ್ಲಭಭಾಯಿ ಪಟೇಲ್ ದಿಟ್ಟ ನಿಲುವು

WhatsApp Image 2023-09-16 at 11.40.21 PM (1)
Published on

ಹುಮನಾಬಾದ್: ಹಳ್ಳಿಖೇಡ(ಬಿ)ದ ಬಸವತೀರ್ಥ ವಿದ್ಯಾಪೀಠ ಶಾಲೆಯಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ ಹಾಗೂ ವಿರಾಟ ವಿಶ್ವಕರ್ಮ ಜಯಂತಿ ಆಚರಿಸಲಾಯಿತು.

ಸಂಸ್ಥೆ ಕಾರ್ಯಾಧ್ಯಕ್ಷ ಕೇಶವರಾವ ತಳಘಟಕರ ಮಾತನಾಡಿ, ಕಲ್ಯಾಣ ಕರ್ನಾಟಕದ ವಿಮೋಚನೆಗಾಗಿ ಉಕ್ಕಿನ ಮನುಷ್ಯ ವಲ್ಲಭಭಾಯಿ ಪಟೇಲ್ ದಿಟ್ಟ ನಿಲುವು ಕೈಗೊಂಡಿದ್ದಾರೆ ಎಂದರು.

ಸೋಮಯ್ಯ ಹಿರೇಮಠ ಧ್ವಜಾರೋಹಣ ನೆರವೇರಿಸಿದರು. ಕಾರ್ಯದರ್ಶಿ ರಮೇಶ ಮಹೇಂದ್ರಕರ್, ವಿದ್ಯಾವತಿ ತೀರ್ಥ, ಚಂದ್ರಕಾಂತ ಬಿರಾದಾರ, ಮಸ್ತಾನ್ ಪಟೇಲ್, ನಿವೃತ್ತ ಶಿಕ್ಷಕ ಶಿವರಾಜ ಸಾಲಿ, ಮಧುಕರ ದೇಶಪಾಂಡೆ ಇತರರಿದ್ದರು. ೨೦೨೩-೨೪ನೇ ಸಾಲಿನ ತಾಲೂಕಾ ಮಟ್ಟದ ಪದವಿ ಪೂರ್ವ ಕಾಲೇಜಿನ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಮಾಣ ಪತ್ರ ವಿತರಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ರೇವಪಯ್ಯ ಸ್ವಾಮಿ ಸ್ವಾಗತಿಸಿದರು. ಸಂಗಮೇಶ ಪಾಟೀಲ್ ನಿರೂಪಣೆ ಮಾಡಿದರು. ನರೇಂದ್ರ ಪಾಟೀಲ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net