ಪ್ರಕೃತಿಯಿದ್ದರೆ ಮನುಷ್ಯರ ಉಳಿವು : ಪಾವ್ಲ್ ಡಿಸೋಜ ಹೇಳಿಕೆ

New Project (41)
Published on

ಮೂಡುಬಿದಿರೆ: ಪ್ರಕೃತಿಯಿಂದಾಗಿ ನಾವಿದ್ದೇವೆ ಆದ್ದರಿಂದ ಪ್ರಕೃತಿಗೆ ಪೂರಕವಾದ ಕೆಲಸ ಮಾಡೋಣ. ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದು ಆನೆಗುಡ್ಡೆ ಸಂತ ಪ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಧರ್ಮಗುರು ಪಾವ್ಲ್ ಡಿಸೋಜ ಹೇಳಿದರು.

ವಾಲ್ಪಾಡಿ ಗ್ರಾಮದ ಆನೆಗುಡ್ಡೆ ಚರ್ಚ್, ಸಂತ ವಿನ್ಸೆಂಟ್ ಪಾವ್ಲ್ ಸಭಾ ಆನೆಗುಡ್ಡೆ, ವೈಸಿಎಸ್ ಆನೆಗುಡ್ಡೆ ಆಶ್ರಯದಲ್ಲಿ ಮೂಡುಬಿದಿರೆ ಅರಣ್ಯ ಇಲಾಖೆ ಸಹಯೋಗದೊಂದಿಗೆ ಚರ್ಚ್ ಆವರಣದಲ್ಲಿ ಭಾನುವಾರ ವನಮಹೋತ್ಸವ ಹಾಗೂ ಸಸಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಪವಲಯ ಅರಣ್ಯಾಧಿಕಾರಿ ಬಸಪ್ಪ ಹಲಗೇರ ಮಾತನಾಡಿ, ಅರಣ್ಯ ಸಂರಕ್ಷಣೆ, ನೀರಿನ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್‌ನಿಂದ ಪರಿಸರಕ್ಕೆ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.

ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ದಿಲೀಪ್ ಡಿಕುನ್ಹಾ, ಕಾರ್ಯದರ್ಶಿ ರಾಬರ್ಟ್ ಡಿಕುನ್ಹಾ, ಗಸ್ತು ಅರಣ್ಯ ಪಾಲಕ ಧರ್ಮರಾಜ ಅತಿಥಿಗಳಾಗಿದ್ದರು. ನೋಬರ್ಟ್ ಪಿರೇರಾ ಸ್ವಾಗತಿಸಿದರು. ಸಂತೋಷ ಸಲ್ದಾನ ಕಾರ್ಯಕ್ರಮ ನಿರೂಪಿಸಿದರು. ವೈಸಿಎಸ್ ಸಂಯೋಜಕಿ ಶೈನಿ ಸಲ್ದಾನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net