

ಕೋಟ: ಪಂಚವರ್ಣದಂತೆ ಇಡಿ ಜಿಲ್ಲಾದ್ಯಂತ ವಿವಿಧ ಸಂಘ ಸಂಸ್ಥೆ ಪರಿಸರ ಉಳಿಸಿ ಬೆಳೆಸಲು ಮುಂದಾಗಬೇಕು, ಆಗ ಮಾತ್ರ ನಮ್ಮ ಪ್ರಕೃತಿ ಉಳಿಸಲು ಸಾಧ್ಯ. ಈ ದಿಸೆಯಲ್ಲಿ ತೆಕ್ಕಟ್ಟೆ ಗ್ರಾಪಂ ರೇವತಿಯವರ ಕಾರ್ಯ ನಿಜಕ್ಕೂ ಪ್ರಶಂಸನೀಯ. ಸ್ವಚ್ಛಭಾರತ ಪರಿಕಲ್ಪನೆ ಪಂಚಾಯಿತಿ ಮೂಲಕ ಅನುಷ್ಠಾನಗೊಳಿಸುವ ಕಾರ್ಯ ಇನ್ನಷ್ಟು ಪಸರಿಸಿಕೊಳ್ಳಲಿ ಎಂದು ಸಹಕಾರಿ ಧುರೀಣ ಕೊಮೆ ಗೋಪಾಲ ಪೂಜಾರಿ ಹೇಳಿದರು.
ತೆಕ್ಕಟ್ಟೆ ಗ್ರಾಪಂ ವ್ಯಾಪ್ತಿಯಲ್ಲಿ ಕೋಟದ ಪಂಚವರ್ಣ ಸಂಸ್ಥೆ ಮಾರ್ಗದರ್ಶನದಲ್ಲಿ ಅಂಗನವಾಡಿ ಕಾರ್ಯಕರ್ತೆ ಯಮುನಾ ಎಲ್ ಕುಂದರ್ ಅನುಷ್ಠಾನಗೊಳಿಸಿದ ಹಸಿರು ಜೀವ ಪ್ರತಿ ಭಾನುವಾರದ ಪರಿಸರಸ್ನೇಹಿ ಅಭಿಯಾನದ ಮೂಲಕ ಗೀತಾನಂದ ಫೌಂಡೇಶನ್‌ನಿಂದ ಕೊಡಮಾಡಿದ ಗಿಡ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಎಸ್‌ಎಲ್‌ಆರ್‌ಎಂ ಘಟಕದ ಮುಖ್ಯಸ್ಥೆ ರೇವತಿ ಮತ್ತು ಅವರ ತಂಡ ಉಪಸ್ಥಿತರಿದ್ದರು.