ಗುಂಡ್ಲುಪೇಟೆ: ಬಂಡೀಪುರ ಹುಲಿಸಂರಕ್ಷಿತ ಪ್ರದೇಶದ ಬಫರ್ ವಲಯದಲ್ಲಿ ಶನಿವಾರ ಸಸಿಗಳನ್ನು ನೆಡುವ ಅಭಿಯಾನ ನಡೆಸಲಾಯಿತು.
ತಾಲೂಕಿನ ನೇನೆಕಟ್ಟೆ ಶ್ರೀಗಂಧದ ನೆಡುತೋಪಿನಲ್ಲಿ ಮೈಸೂರಿನ ಆಟೋಮೋಟಿವ್ ಆಕ್ಸೆಲ್ ಸಂಸ್ಥೆ ವತಿಯಿಂದ 200 ಕ್ಕೂ ಹೆಚ್ಚಿನ ಸಸಿಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರತಿನಿಧಿಗಳು, ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.