

ಪಡುಬಿದ್ರಿ: ಸಾಂತೂರು-ಪಿಲಾರು ಶ್ರೀ ಆಲ್ ಉರಿ ನಾಗಬ್ರಹ್ಮಸ್ಥಾನದಲ್ಲಿ ಸೋಮವಾರ ರಾತ್ರಿ ಸಾಂತೂರು ಶ್ರೀ ಬ್ರಹ್ಮಬೈದರ್ಕಳ ನೇಮ ಸಂಪನ್ನಗೊಂಡಿತು. ಪಿಲಾರು-ಸಾಂತೂರು ಗ್ರಾಮಸ್ಥರ ಕೂಡುವಿಕೆಯೊಂದಿಗೆ 12 ವರ್ಷಗಳಿಗೊಮ್ಮೆ ಗಡುಪಾಡು ನೇಮ ನಡೆಯುತ್ತದೆ.
ಭಾನುವಾರ ರಾತ್ರಿ ಸಾಂತೂರು ಶ್ರೀ ಬ್ರಹ್ಮಬೈದರ್ಕಳ ಸನ್ನಿಧಿಯಲ್ಲಿ ಅಗೆಲು ತಂಬಿಲ ಬಳಿಕ ಭಂಡಾರ ಹೊರಟು ಗಡುಪಾಡಿಗೆ ಆಗಮಿಸಿತು. ಸೋಮವಾರ ಬೈದರ್ಕಳ ನೇಮ ಹಾಗೂ ದರ್ಶನ ಸೇವೆಯನ್ನು ನೂರಾರು ಮಂದಿ ಕಣ್ತುಂಬಿಕೊಂಡರು. ಪಿಲಾರು ಪರಾರಿ, ಸಾಂತೂರು ಪರಾರಿ, ಪಿಲಾರು ಮಜಲಬೆಟ್ಟುಬೀಡು, ಪಿಲಾರು ತಂಬಿದಬೆಟ್ಟು, ಪಿಲಾರು ಕಂಕಣಗುತ್ತು, ಸಾಂತೂರು ಕುಂದಬೆಟ್ಟುಗುತ್ತು, ಸಾಂತೂರು ಸಾಮಾನಾಡಿಗುತ್ತು ಮನೆತನದ ಪ್ರಮುಖರು, ಗುತ್ತು, ಬರ್ಕೆ, ದೈವಸ್ಥಾನಗಳ ಮುಖ್ಯಸ್ಥರು, ಗುರಿಕಾರರು, ಸಾಂತೂರು -ಪಿಲಾರು ಗ್ರಾಮಸ್ಥರು, ಆಲ್ ಉರಿನಾಗಬ್ರಹ್ಮಸ್ಥಾನ ಆಡಳಿತ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿ ಪ್ರಮುಖರು ಪಾಲ್ಗೊಂಡಿದ್ದರು.