ಆಧುನಿಕ ಶಿಕ್ಷಣದ ಜತೆ ಸಂಸ್ಕಾರ ಕಲಿಕೆ

shikshaka
ಅದಮಾರು ಪಿಪಿಸಿಯಲ್ಲಿ ನಡೆದ ಶಿಕ್ಷಕ ರಕ್ಷಕ ಸಭೆಯಲ್ಲಿ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ಪ್ರತಿನಿಧಿ ಪ್ರೊ.ನಿತ್ಯಾನಂದ ಮಾತನಾಡಿದರು. ಪ್ರಾಂಶುಪಾಲ ಸಂಜೀವ ನಾಯ್ಕ, ವಿಜ್ಞಾನ ವಿಭಾಗ ಸಂಯೋಜಕ ರಾಧಾಕೃಷ್ಣ ಕಿಣಿ, ವಾಣಿಜ್ಯ ವಿಭಾಗ ಸಂಯೋಜಕಿ ಜಯಶ್ರೀ ಇದ್ದರು.
Published on

ಪಡುಬಿದ್ರಿ: ಪೂರ್ಣಪ್ರಜ್ಞದ ಹಳೇ ವಿದ್ಯಾರ್ಥಿಗಳು ಇಂದು ಎಲ್ಲ ಕ್ಷೇತ್ರದಲ್ಲೂ ಒಳ್ಳೆಯ ಉದ್ಯೋಗದಲ್ಲಿ ದುಡಿಯುತ್ತಿರುವುದು ಹೆಮ್ಮೆಯ ವಿಷಯ. ಉತ್ತಮ ಆಧುನಿಕ ಶಿಕ್ಷಣದ ಜತೆ ಸಂಸ್ಕಾರ, ಸಂಸ್ಕೃತಿ ಕಲಿಸುವುದರೊಂದಿಗೆ ಆಧುನಿಕ ಶಿಕ್ಷಣಕ್ಕೆ ಅಗತ್ಯ ಸವಲತ್ತುಗಳನ್ನು ಸ್ವಾಮೀಜಿ ನೀಡಿದ್ದಾರೆ ಎಂದು ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ಪ್ರತಿನಿಧಿ ಪ್ರೊ.ನಿತ್ಯಾನಂದ ಹೇಳಿದರು. ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕ ರಕ್ಷಕರ ಸಭೆಯಲ್ಲಿ ಮಾತನಾಡಿದರು.

ಪ್ರಾಂಶುಪಾಲ ಸಂಜೀವ ನಾಯ್ಕ ಮಾತನಾಡಿ, ಕಾಲೇಜಿನ ನಿಯಮ ಹಾಗೂ ಪಾಲಕರು ಉತ್ತಮ ಫಲಿತಾಂಶಕ್ಕೆ ಯಾವ ರೀತಿಯಲ್ಲಿ ಶಿಕ್ಷಕರ ಜತೆ ಕೈಜೋಡಿಸಬೇಕೆಂದು ಸಲಹೆ ನೀಡಿದರು. ವಿಜ್ಞಾನ ವಿಭಾಗ ಸಂಯೋಜಕ ರಾಧಾಕೃಷ್ಣ ಕಿಣಿ, ವಾಣಿಜ್ಯ ವಿಭಾಗ ಸಂಯೋಜಕಿ ಜಯಶ್ರೀ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಚೇತಾ ಸ್ವಾಗತಿಸಿದರು. ಅಕ್ಷತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಆಫ್ರಿಯಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net