ವಿದ್ಯಾರ್ಥಿವೇತನ ವಿತರಣೆ

scholership
ಬ್ರಾಹ್ಮಣ ಸಖಾ ಬಳಗ, ಕಾರ್ಕಳ ಅಭಯಹಸ್ತ ಚಾರಿಟೆಬಲ್ ಟ್ರಸ್ಟ್ ಸಹಯೋಗದೊಂದಿಗೆ ಭಾನುವಾರ ಶ್ರೀ ಗುರುರಾಘವೇಂದ್ರ ಮಠದಲ್ಲಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ, ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಗೌರವಧನ ನೀಡಲಾಯಿತು.
Published on

ಕಾರ್ಕಳ: ಬ್ರಾಹ್ಮಣ ಸಖಾ ಬಳಗ, ಕಾರ್ಕಳ ಅಭಯಹಸ್ತ ಚಾರಿಟೆಬಲ್ ಟ್ರಸ್ಟ್ ಸಹಯೋಗದೊಂದಿಗೆ ಭಾನುವಾರ ಶ್ರೀ ಗುರುರಾಘವೇಂದ್ರ ಮಠದಲ್ಲಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ, ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಗೌರವಧನ ನೀಡಲಾಯಿತು.

ಅಭಯಹಸ್ತ ಚಾರಿಟೆಬಲ್ ಟ್ರಸ್ಟ್ ಸದಸ್ಯ ಡಾ.ಗುರುಚರಣ್ ಮಾತನಾಡಿದರು. ಟ್ರಸ್ಟ್ ಕಾರ್ಯಚಟುವಟಿಕೆ, ವಿದ್ಯಾರ್ಥಿಗಳು ಪಾಲಿಸಬೇಕಾದ ಕರ್ತವ್ಯಗಳ ಬಗ್ಗೆ ಡಾ.ಶ್ರೀರಾಮ ಮುಗೇರಾಯ ವಿವರಿಸಿದರು. ವೆಂಕಟರಾಜ್ ಭಟ್ ಪೆರ್ವಾಜೆ ಟ್ರಸ್ಟ್ ಯೋಜನೆಗಳಲ್ಲೊಂದಾದ ಗೋಗ್ರಾಸ ಗೋನಿ ಯೋಜನೆ ಬಗ್ಗೆ ವಿವರಿಸಿದರು.

ಶ್ರೀ ಗುರುರಾಘವೇಂದ್ರ ಮಠದಲ್ಲಿ 30 ವರ್ಷಗಳಿಂದ ಚಾಕರಿ ಮಾಡಿಕೊಂಡು ಬರುತ್ತಿರುವ ಸುಮತಿ ದೇವಾಡಿಗ ಅವರನ್ನು ಗೌರವಿಸಲಾಯಿತು. ನೆಕ್ಲಾಜೆಗುತ್ತು ಶ್ರೀರಾಘವೇಂದ್ರ ಉಪಾಧ್ಯಾಯ, ಕಾಮಾಕ್ಷಿ ಅಮ್ಮ, ಶ್ರೀ ಗುರುರಾಘವೇಂದ್ರ ಮಠದ ಅರ್ಚಕ ಶ್ರೀಕರ ಆಚಾರ್ಯ, ಟ್ರಸ್ಟ್ ದಾನಿಗಳು, ಪಾಲಕರು ಉಪಸ್ಥಿತರಿದ್ದರು. ವಿಘ್ನೇಶ್ ಜೆ.ಪಿ.ಪೆರ್ವಾಜೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net