ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಕಾನರ್ಪ ಶ್ರೀ ರಾಮಾಂಜನೇಯ ಬೆಟ್ಟದಲ್ಲಿ ಮಕರ ಸಂಕ್ರಾಂತಿಯಂದು 49ನೇ ವರ್ಷದ ಪೂಜೆಯ ಪ್ರಯುಕ್ತ ರಾಮಾಂಜನೇಯ ಸ್ವಾಮಿ ಗುಡಿಯಲ್ಲಿ ಬೆಳಗ್ಗೆ ಗಣಹೋಮ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಉಜಿರೆ ಎಸ್ಡಿಎಂ ಕಾಲೇಜು ಅಸಿಸ್ಟೆಂಟ್ ಪ್ರೊಫೆಸರ್ ಡಾ.ಅಕ್ಷತಾ ಕೆ.ಮಾತನಾಡಿದರು. ಕರಾಟೆಯಲ್ಲಿ ಸಾಧನೆಗೈದ ಇಬ್ಬರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ದೇವಸ್ಥಾನದ ಶ್ರಮದಾನ ಹಾಗೂ ಇತರ ಕೆಲಸಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಸ್ವಯಂಸೇವಕರನ್ನು ಗೌರವಿಸಲಾಯಿತು.
ಬ್ರಾಹ್ಮರಿ ಭಜನಾ ಮಂಡಳಿ ಕಲಾಕುಂಚ ಸೋಮಂತಡ್ಕ ಅವರಿಂದ ಕುಣಿತ ಭಜನೆ ಕಾರ್ಯಕ್ರಮ ನಡೆಯಿತು. ಶ್ರೀ ರಾಮಾಂಜನೇಯ ದೇವರಿಗೆ ವೈಭವದ ಮಹಾಪೂಜೆ, ಮಂಗಳಾರತಿ ಕಾರ್ಯಕ್ರಮ ನಡೆದು ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯ ನಡೆಯಿತು.
ಗುಡಿಯ ವ್ಯವಸ್ಥಾಪಕ ಮೊಕ್ತೇಸರ ಕಿಶೋರ್ ಕುಮಾರ್, ಕಿರಣ್ ಕುಮಾರ್ ಕುರುಡ್ಯ, ಗಣ್ಯರಾದ ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವರ್ಮಾ, ಶಿಕ್ಷಕರಾದ ಗೋಪಾಲ ಕೃಷ್ಣ, ಬಾಬುಮಾಸ್ಟರ್, ಅನಂತ ಭಟ್ ಮಚ್ಚಿಮಲೆ, ಎಕ್ಸೆಲ್ ಕಾಲೇಜು ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ನಾರಾಯಣ ಗೌಡ ದೇವಸ್ಯ, ಜಯರಾಮ್ ಮಾಸ್ಟರ್ ಕಲಾಕುಂಚ, ಬಂಗಾಡಿ ಬ್ಯಾಂಕ್ ಅಧ್ಯಕ್ಷ ಹರೀಶ್ ಸಾಲಿಯಾನ್, ಉಪಾಧ್ಯಕ್ಷ ಆನಂದ ಗೌಡ, ಕಡಿರುದ್ಯಾವರ, ಮುಂಡಾಜೆ ಗ್ರಾಪಂ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು. ನಾರಾಯಣ ಪೂಜಾರಿ ಸದಾಶಿವ ನಾಯ್ಕ ಪಣಿಕಲ್ ನಿರೂಪಿಸಿದರು.