ಸಂಜೀವಿನಿ ಸಭಾಂಗಣ ಉದ್ಘಾಟನೆ

Published on

ಸೋಮವಾರಪೇಟೆ: ಹಾನಗಲ್ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣವಾಗಿರುವ ಸಂಜೀವಿನಿ ಸಭಾಂಗಣವನ್ನು ಶಾಸಕ ಡಾ.ಮಂತರ್‌ಗೌಡ ಸೋಮವಾರ ಉದ್ಘಾಟಿಸಿದರು.

ಮಹಿಳೆಯರ ಸ್ವಸಹಾಯ ಸಂಘಗಳು ತಮ್ಮ ಕಾರ್ಯಚಟುವಟಿಗೆಗೆ ಈ ಸಭಾಂಗಣವನ್ನು ಉಪಯೋಗಿಸಿಕೊಳ್ಳಬಹುದು. ಸ್ವಸಹಾಯ ಸಂಘಗಳ ಮೂಲಕ ಅನೇಕ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಕಂಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷ ಯಾಶಾಂತ್ ಕುಮಾರ್, ಉಪಾಧ್ಯಕ್ಷರಾದ ರೇಣುಕಾ, ಸದಸ್ಯ ಮಿಥುನ್ ಹಾನಗಲ್, ಸುದೀಪ್, ರಘು, ಪ್ರಕಾಶ್, ವಿಜಯ್, ಸುಶೀಲಾ, ಇಒ ಪರಮೇಶ ಕುಮಾರ್, ಪಿಡಿಒ ವಿ.ಯು. ಆಸ್ಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net