

ಕೂಡಲೇ ಕ್ಷಮೆಯಾಚನೆಗೆ ಒತ್ತಾಯ : ಇಲ್ಲದಿದ್ದರೆ ಹೋರಾಟ ಎಚ್ಚರಿಕೆ
ಯಾದಗಿರಿ .ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಮತ್ತು ಅವರ ಕುಟುಂಬ ಕುರಿತು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಅವಹೇಳನಕಾರಿಯಾಗಿ ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್ ಯುವ ಮುಖಂಡ ಸಂಜಿವರೇಡ್ಡಿ .ಐರೆಡ್ಡಿ ಬೆಂಡೆಬೆಂಬಳಿ ತೀವ್ರವಾಗಿ ಖಂಡಿಸಿದ್ದಾರೆ .
ಮಾಧ್ಯಮ ಹೇಳಿಕೆಯೊಂದರಲ್ಲಿ ಮಾತನಾಡುವಾಗ ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿಯೇ ಅರ್ಧ ಪಾಕಿಸ್ತಾನವಿದೆ ಎಂಬ ಹೇಳಿಕೆ ಅವರಿಗೆ ಶೋಭೆ ತರುವಂತದ್ದಲ್ಲ ಅವರ ಹೆಂಡತಿ ಮುಸ್ಲಿಂ ಮಹಿಳೆ ಎಂಬ ಕಾರಣಕ್ಕೆ ಈ ಹೇಳಿಕೆ ನೀಡಿರುವುದು ಎಷ್ಟರಮಟ್ಟಿಗೆ ಸರಿ ?, ಬೇರೊಬ್ಬರ ವೈಯಕ್ತಿಕ ತೇಜೋವಧೆ ಮಾಡುವುದು ಸರಿಯಲ್ಲ.
.ನಮ್ಮ ದೇಶದಲ್ಲಿ ನಾನಾ ಜಾತಿಗಳಿವೆ ಎಲ್ಲರೂ ಭಾವೈಕ್ಯತೆಯಿಂದ ಜೀವನ ನಡೆಸುತ್ತಾರೆ ಆದರೆ ಬಸನಗೌಡ ಯತ್ನಾಳರವರು ಪದೇ ಪದೇ ಈ ರೀತಿಯ ಹೇಳಿಕೆ ನೀಡುತ್ತಾ ಸಮಾಜದಲಿನ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ.ಕೂಡಲೇ ಅವರು, ದಿನೇಶ್ ಗುಂಡೂರಾವ್ ಬಳಿ ಕ್ಷಮೆ ಕೇಳಬೇಕು ಮತ್ತು ಬಿಜೆಪಿ ವರಿಷ್ಠರು ಯತ್ನಾಳರವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಯುವ ಮುಖಂಡ ಸಂಜಿವರೇಡ್ಡಿ ಐರೆಡ್ಡಿ ಬೆಂಡೆಬೆಂಬಳಿ ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಯತ್ನಾಳ ಮತ್ತು ಬಿಜೆಪಿ ವಿರುದ್ಧ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಐರೆಡ್ಡಿ ಎಚ್ಚರಿಕೆ ನೀಡಿದ್ದಾರೆ.