ಸಂಗೀತ ಶ್ರಾವಣ

Satish hampiholi
Published on

ಬೆಂಗಳೂರು: ಪಂ. ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಶನ್ ಟ್ರಸ್ಟ್ ಭಾನುವಾರ (ಆ. 25) ಸಂಜೆ 3.30ಕ್ಕೆ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ‘ಸಂಗೀತ ಶ್ರಾವಣ’ ಸಂಗೀತೋತ್ಸವ ಹಮ್ಮಿಕೊಂಡಿದೆ.

ಈ ಸಂಗೀತೋತ್ಸವದಲ್ಲಿ ತಬಲಾವಾದಕ ಪಂಡಿತ್ ಸಂತೋಷ್ ಕುಲಕರ್ಣಿ ಅವರಿಗೆ ‘ಸದ್ಗುರು ಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 10 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ. ಸಂಜೆ 6 ಗಂಟೆಗೆ ನಡೆಯಲಿರುವ ವೇದಿಕೆ ಕಾರ್ಯಕ್ರಮವನ್ನು ನೃತ್ಯ ಕಲಾವಿದೆ ಯಮುನಾ ಶ್ರೀನಿಧಿ ಉದ್ಘಾಟಿಸಲಿದ್ದಾರೆ. ನ್ಯಾಯವಾದಿ ಎಚ್. ಸುಬ್ರಹ್ಮಣ್ಯ ಜೋಯಿಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ಕಾರ್ತಿಕ್ ಫೌಂಡೇಶನ್ ಅಧ್ಯಕ್ಷೆ ರೇಖಾ ಕೆ. ಗೋವಿಂದ್, ಚೈತನ್ಯ ಸಮಗ್ರ ಸೇವಾ ಸಂಸ್ಥೆಯ ಮುಖ್ಯಸ್ಥೆ ಚಿತ್ರ ನಾಗಶಯನ ಇತರರು ಭಾಗವಹಿಸಲಿದ್ದಾರೆ.

ಟ್ರಸ್ಟ್‌ನ ಸಂಸ್ಥಾಪಕ ಡಾ. ಪಂ. ಸತೀಶ್ ಹಂಪಿಹೊಳಿ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತಬಲಾ ಸೋಲೋದಲ್ಲಿ ಪಂಡಿತ್ ಸಂತೋಷ್ ಕುಲಕರ್ಣಿ ಹಾಗೂ ಲೆಹ್ಟ್ಟರಾದಲ್ಲಿ ಡಾ. ಅರಣ್ಯಕುಮಾರ್ ಜೊತೆಯಾಗಲಿದ್ದಾರೆ. ಸೀಮಾ ರಾಯ್ಕರ್ ಹಾಡಲಿದ್ದಾರೆ. ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಶನ್ ವಿದ್ಯಾರ್ಥಿ ವೃಂದದವರಿಂದ ತಬಲಾ ತರಂಗ್ ಜರಗಲಿದೆ. ಗುರುಕುಮಾರ ಪಂಚಾಕ್ಷರೇಶ್ವರ ಸಂಗೀತ ಕಲಾವೇದಿಕೆಯ ವಿದ್ಯಾರ್ಥಿಗಳು ರಾಗ ತರಂಗ ಹಿಂದುಸ್ತಾನಿ ಗಾಯನ ನಡೆಸಿಕೊಡಲಿದ್ದಾರೆ. ಅಮೃತೇಶ್ ಕುಲಕರ್ಣಿ, ನಾಗೇಂದ್ರ ರಾಣಾಪೂರ್, ಅಮಿತ್ ಭಟ್ ಹಾಗೂ ಪುನೀತ್ ರಾಣಾಪೂರ್ ವಾದ್ಯ ಸಹಕಾರ ನೀಡಲಿದ್ದಾರೆ. ಶ್ರೀ ಗುರುಕುಮಾರ ಪಂಚಾಕ್ಷರೇಶ್ವರ ಸಂಗೀತ ಕಲಾ ವೇದಿಕೆಯ ವಿದ್ಯಾರ್ಥಿಗಳು ಸಮೂಹ ಗಾಯನ ನಡೆಸಿಕೊಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net